News Kannada
ಎಸ್‌ಪಿ ತನ್ನ 3 ಅಭ್ಯರ್ಥಿಗಳನ್ನು (ಜಯಾ ಬಚ್ಚನ್, ರಾಮ್‌ಜಿಲಾಲ್ ಸುಮನ್, ಅಲೋಕ್ ರಂಜನ್) ಮರುನಾಮ ನಿರ್ದೇಶನ ಮಾಡಿದೆ. ಇನ್ನು, ಬಿಜೆಪಿ 7ರ ಬದಲಾಗಿ 8 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.
ಒಂದು ವೇಳೆ ಬಿಜೆಪಿಯು 8ನೇ ಅಭ್ಯರ್ಥಿಯನ್ನು ಕಣಕ್ಕೆ ಇಳಿಸದೇ ಇರುತ್ತಿದ್ದರೆ, ಉ.ಪ್ರದೇಶದ ಎಲ್ಲ 10 ರಾಜ್ಯಸಭಾ ಸ್ಥಾನಗಳ ಅಭ್ಯರ್ಥಿಗಳೂ ಅವಿರೋಧವಾಗಿ ಆಯ್ಕೆಯಾಗುತ್ತಿದ್ದರು. ರಾಜ್ಯಸಭೆ ಚುನಾವಣೆಯಲ್ಲಿ ಗೆಲ್ಲಬೇಕೆಂದರೆ, ಪ್ರತೀ ಅಭ್ಯರ್ಥಿಯು ಸುಮಾರು 37 ಪ್ರಥಮ ಆದ್ಯತೆಯ ಮತಗಳನ್ನು ಗಳಿಸಬೇಕಾಗುತ್ತದೆ.
ಹಿಮಾಚಲ ಪ್ರದೇಶದಲ್ಲಿ ಇರುವ ಒಂದೇ ಒಂದು ರಾಜ್ಯಸಭಾ ಸೀಟಿಗೆ ಬಿಜೆಪಿಯು ಕಾಂಗ್ರೆಸ್‌ನ ಅಭಿಷೇಕ್ ಮನು ಸಿಂಘ್ವಿ ವಿರುದ್ಧ ಹರ್ಷ್ ಮಹಾಜನ್‌ರನ್ನು ಕಣಕ್ಕಿಳಿಸಿದೆ. ತನ್ನ ಅಭ್ಯರ್ಥಿಯ ಗೆಲುವಿಗೆ ಸಾಕಷ್ಟು ಮತಗಳು ಇಲ್ಲದಿದ್ದರೂ ಬಿಜೆಪಿ ಈ ಸಾಹಸಕ್ಕೆ ಕೈಹಾಕಿದೆ. ಹಿಮಾಚಲದಲ್ಲಿ ಬಿಜೆಪಿ 25 ಶಾಸಕರನ್ನು ಹೊಂದಿದ್ದರೆ, ಕಾಂಗ್ರೆಸ್ 40 ಶಾಸಕರನ್ನು ಹೊಂದಿದೆ. ಇದೇ ವೇಳೆ, ಕರ್ನಾಟಕದ 4 ಸ್ಥಾನಗಳಿಗೂ ಮಂಗಳವಾರ ಚುನಾವಣೆ
ನಡೆಯಲಿದೆ.
ಹನಿ ಹನಿ ಕೂಡಿ ಹಳ್ಳ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.
This site is protected by reCAPTCHA and the Google
Privacy Policy and
Terms of Service apply.
44