36 ವರ್ಷಗಳ ಬಳಿಕ ಒಂದಾದ ಸೂಪರ್​ಸ್ಟಾರ್ ಕಮಲ್-ಮಣಿರತ್ನಂ

ಚೆನ್ನೈ: ಕಮಲ್ ಹಾಸನ್ ಅವರು ತಮಿಳು ಚಿತ್ರರಂಗದ ಸೂಪರ್​ಸ್ಟಾರ್ ಸಿನಿಮಾ ಕೆಲಸಗಳಲ್ಲೇ ಹೆಚ್ಚು ತೊಡಗಿಕೊಂಡಿದ್ದಾರೆ. ಲೋಕೇಶ್ ಕನಗರಾಜ್ ನಿರ್ದೇಶನದ ‘ವಿಕ್ರಮ್’ ಸಿನಿಮಾ ಹಿಟ್ ಆದ ಬಳಿಕವಂತೂ ಅವರ ಜನಪ್ರಿಯತೆ ದುಪ್ಪಟ್ಟಾಗಿದೆ.

ಸದ್ಯ, ಕಮಲ್ ಹಾಸನ್ ಅವರು ಹಲವು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ‘ಇಂಡಿಯನ್ 2’ ಸಿನಿಮಾ ಕೆಲಸಗಳು ಬಹುತೇಕ ಪೂರ್ಣಗೊಂಡಿವೆ ಎನ್ನಲಾಗಿದೆ. ನಾಗ್ ಅಶ್ವಿನ್ ನಿರ್ದೇಶನದ ‘ಕಲ್ಕಿ 2898 ಎಡಿ’, ಎಚ್​. ವಿನೋದ್ ನಿರ್ದೇಶನ ಮಾಡುತ್ತಿರುವ ‘KH233’ ಸಿನಿಮಾಗಳಲ್ಲಿ ಕಮಲ್ ನಟಿಸುತ್ತಿದ್ದಾರೆ. ಇದರ ಜೊತೆ ಮಣಿರತ್ನಂ ನಿರ್ದೇಶನ ಮಾಡುತ್ತಿರುವ ‘KH234’ ಸಿನಿಮಾ ಕೆಲಸಗಳಲ್ಲೂ ಅವರು ತೊಡಗಿಕೊಳ್ಳಲಿದ್ದಾರೆ. ಈ ಚಿತ್ರಕ್ಕೆ ಅಧಿಕೃತವಾಗಿ ಚಾಲನೆ ಸಿಕ್ಕಿದೆ.

ಕಮಲ್ ಹಾಸನ್ ಅವರ 234ನೇ ಸಿನಿಮಾದ ಲಾಂಚ್ ಇಂದು (ಅ.27) ಚೆನ್ನೈನಲ್ಲಿ ನಡೆದಿದೆ. ಈ ಕಾರ್ಯಕ್ರಮದಲ್ಲಿ ಮ್ಯೂಸಿಕ್ ಕಂಪೋಸರ್ ಎಆರ್​ ರೆಹಮಾನ್, ಸಂಕಲನಕಾರ ಶ್ರೀಕರ್ ಪ್ರಸಾದ್ ಹಾಗೂ ಛಾಯಾಗ್ರಾಹಕ ರವಿ ಚಂದ್ರನ್ ಮೊದಲಾದವರು ಭಾಗಿ ಆಗಿದ್ದಾರೆ. ‘ವಿಕ್ರಮ್’, ‘ಲಿಯೋ’, ‘ಕೈದಿ’ ಸಿನಿಮಾಗಳ ಸ್ಟಂಟ್ ಕೊರಿಯೋಗ್ರಾಫರ್ ಅಂಬುಮಣಿ ಹಾಗೂ ಅರಿವುಮಣಿ ಕೂಡ ಸಮಾರಂಭದಲ್ಲಿ ಭಾಗಿ ಆಗಿದ್ದು ಕುತೂಹಲ ಮೂಡಿಸಿದೆ.

1987ರಲ್ಲಿ ‘ನಾಯಕನ್’ ಸಿನಿಮಾ ರಿಲೀಸ್ ಆಯಿತು. ಕಮಲ್ ಹಾಸನ್ ನಟನೆಯ ಈ ಚಿತ್ರಕ್ಕೆ ಮಣಿರತ್ನಂ ಅವರ ನಿರ್ದೇಶನ ಇತ್ತು. ಇದಾದ ಬಳಿಕ ಇವರು ಒಟ್ಟಾಗಿ ಕೆಲಸ ಮಾಡಿಲ್ಲ. ಈಗ 36 ವರ್ಷಗಳ ಬಳಿಕ ಸೂಪರ್ ಹಿಟ್ ಜೋಡಿ ಒಂದಾಗಿದೆ. ಕಮಲ್ ಹಾಸನ್, ಮಣಿರತ್ನಂ ಮೊದಲಾದವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಸದ್ಯ ಈ ಸುದ್ದಿ ಅಭಿಮಾನಿಗಳಲ್ಲಿ ಜೋಶ್‌ ತುಂಬಿಸಿದೆ.

Font Awesome Icons

Leave a Reply

Your email address will not be published. Required fields are marked *