46 ವರ್ಷಗಳ ಬಳಿಕ ಪುರಿ ರತ್ನಭಂಡಾರಕ್ಕೆ ಇಂದು ಪ್ರವೇಶ

ಒಡಿಶಾದ ಪುರಿಯಲ್ಲಿರುವ ಪ್ರಭು ಶ್ರೀ ಜಗನ್ನಾಥನ ಸನ್ನಿಧಾನ ದೇಶದ ಕೋಟ್ಯಂತರ ಆಸ್ತಿಕರ ಆರಾಧ್ಯ ತಾಣವಾಗಿದೆ. ಶ್ರೀ ಜಗನ್ನಾಥ, ಸುಭದ್ರಾ, ಬಲಭದ್ರ ದೇವರ ಸಾನ್ನಿಧ್ಯವಿರುವ ಈ ದೇವಳದ ರತ್ನಭಂಡಾರ್‌ ಈಚೆಗೆ ಬಹಳ ಸುದ್ದಿಯಲ್ಲಿದೆ. ಇದಕ್ಕೆ ಮುಖ್ಯ ಕಾರಣ, ಇದರ ಕೀಲಿ ಕೈ ಕಳೆದುಹೋಗಿದೆ ಎನ್ನುವುದು. ಇದು ಈಚೆಗೆ ನಡೆದ ಚುನಾವಣೆಯಲ್ಲೂ ಪ್ರಸ್ತಾವವಾಗಿತ್ತು. ಬರೋಬ್ಬರಿ 46 ವರ್ಷಗಳ ಅನಂತರ ಈಗ ರತ್ನಭಂಡಾರವನ್ನು ತೆರೆಯಲು ಮುಹೂರ್ತ ನಿಗದಿಯಾಗಿದೆ.

Ad

300x250 2

ಹೀಗಿರುವಾಗ ಹಲಾವಾರು ಪ್ರಶ್ನೆಗಳು ನಮ್ಮಲ್ಲಿ ಬರಬಹುದು, ಭಂಡಾರದ ಒಳಗೇನಿದೆ? ಎಷ್ಟು ಮೌಲ್ಯದ ಚಿನ್ನಾಭರಣಗಳಿವೆ? ಯಾವ್ಯಾವ ರತ್ನ, ವಜ್ರ ವೈಢೂರ್ಯಗಳಿವೆ? ಎಂಬೆಲ್ಲ ಕುತೂಹಲ-ಅಚ್ಚರಿಗಳಿಗೆ ರವಿವಾರ ವಿರಾಮ ಬೀಳಲಿದೆ.

ಎಲ್ಲಿದೆ ರತ್ನಭಂಡಾರ?:
ಪುರಿ ಜಗನ್ನಾಥ ದೇವಸ್ಥಾನದ ಉತ್ತರ ಭಾಗದ ಜಗನ್ಮೋಹನ ಎಂಬ ಪ್ರದೇಶದಲ್ಲಿ ಈ ರತ್ನ ಭಂಡಾರವಿದ್ದು ದೇವಾಲಯದ ಮಾದರಿಯನ್ನು ಹೊಂದಿದೆ. ಇದು 11.78 ಮೀಟರ್‌ ಎತ್ತರವಿದ್ದು ಇದರಲ್ಲಿ ಹೊರ ಭಂಡಾರ (ಬಾಹರ್‌ ಭಂಡಾರ್‌), ಒಳ ಭಂಡಾರ (ಭೀತರ್‌ ಭಂಡಾರ್‌) ಎಂಬ ಗೋಪುರಗಳಿವೆ. ಇದರಲ್ಲಿ 5 ಚೇಂಬರ್‌ಗಳಿದ್ದು ಹೊರ ಭಂಡಾರಕ್ಕಿಂತ ಒಳ ಭಂಡಾರ ವಿಶಾಲವಾಗಿದೆ. ಜಗನ್ನಾಥನ ವಾರ್ಷಿಕ ರಥಯಾತ್ರೆಗೆ ಬಳಸುವ ಆಭರಣಗಳು ಹೊರ ಭಂಡಾರದಲ್ಲಿದ್ದು ಒಳ ರತ್ನ ಭಂಡಾರದ 3 ಚೇಂಬರ್‌ಗಳಲ್ಲಿ 15 ಮರದ ಪೆಟ್ಟಿಗೆಗಳ ತುಂಬ ಬರೀ ಬೆಳ್ಳಿ, ಬಂಗಾರ, ರೂಬಿ, ವಜ್ರ ಇತ್ಯಾದಿಗಳ ಅಪರೂಪದ ವಸ್ತುಗಳೇ ತುಂಬಿವೆ ಎನ್ನಲಾಗಿದೆ. ಪುರಿ ರಾಜರು, ಒಡಿಶಾವನ್ನು ಆಳಿದ ರಾಜಮನೆತನಗಳು, ನೇಪಾಲದ ದೊರೆಗಳು ಶ್ರೀ ಜಗನ್ನಾಥನ ಭಕ್ತರಾಗಿದ್ದು ಅವರು ದೇವರಿಗೆ, ದೇವಸ್ಥಾನಕ್ಕೆ ದಾನವಾಗಿ ಕೊಟ್ಟ ವಸ್ತುಗಳನ್ನು ಇಲ್ಲಿಡಲಾಗಿದೆ ಎನ್ನಲಾಗಿದೆ.

ರತ್ನಭಂಡಾರದ ಬಗ್ಗೆ ಕುತೂಹಲ ಹಾಗೂ ದಂತಕತೆಗಳು ಸಾಕಷ್ಟಿವೆ. ಒಂದು ಕತೆಯ ಪ್ರಕಾರ, ಭಂಡಾರದಲ್ಲಿ ಇರುವ ಅಮೂಲ್ಯ ವಸ್ತುಗಳು, ಚಿನ್ನಾಭರಣಗಳನ್ನು ಮಾರಾಟ ಮಾಡಿದರೆ ಬರುವ ಹಣದಿಂದ ಇಡೀ ದೇಶದ ಜನರಿಗೆ ಎರಡು ವರ್ಷಗಳ ಉಚಿತವಾಗಿ ಊಟ ಹಾಕಬಹುದಂತೆ! ಆ ಕತೆಗಳು ಏನೇ ಇರಲಿ. ಆದರೆ ಅಲ್ಲಿರುವ ಸಂಪತ್ತಿನ ಬಗ್ಗೆ ಈವರೆಗೆ ಕುತೂಹಲ ತಣಿದಿಲ್ಲ.

1978ರ ಬಳಿಕ ಹಲವು ಬಾರಿ ರತ್ನಭಂಡಾರದ ಬಾಗಿಲು ತೆರೆದು ದಾಸ್ತಾನು ಲೆಕ್ಕ ಹಾಕುವ ಪ್ರಯತ್ನಗಳು ನಡೆದವಾದರೂ ಆ ಯಾವ ಪ್ರಯತ್ನಗಳು ಯಶಸ್ವಿಯಾಗಿರಲಿಲ್ಲ. 2018ರ ಎಪ್ರಿಲ್‌ನಲ್ಲಿ ಒಡಿಶಾ ಹೈಕೋರ್ಟ್‌ ಆದೇಶದ ಮೇರೆಗೆ ಭಾರತೀಯ ಪುರಾತತ್ವ ಇಲಾಖೆ ಅಧಿಕಾರಿಗಳನ್ನು ಒಳಗೊಂಡ 16 ಮಂದಿಯ ಸಮಿತಿ ರತ್ನಭಂಡಾರದ ಪ್ರವೇಶಕ್ಕೆ ಮುಂದಾದರೂ ಒಳಗಿನ ಚೇಂಬರ್‌ನ ಬೀಗದ ಕೀ ಸಿಗದ ಕಾರಣ ಪ್ರವೇಶ ವಿಫ‌ಲವಾಯಿತು.

ಪುರಿಯ ಜಿಲ್ಲಾಧಿಕಾರಿ ಕೀ ತಂದಿರಲಿಲ್ಲ. ಕೀ ಕಳೆದು ಹೋದ ಸಂಗತಿ ಕೋಟ್ಯಂತರ ಜಗನ್ನಾಥನ ಭಕ್ತರ ಆಕ್ರೋಶಕ್ಕೆ ಕಾರಣವಾಗಿತ್ತು. ಒಳ ಭಂಡಾರಕ್ಕೆ 3 ಕೀಗಳಿದ್ದು ಒಂದು ಪುರಿಯ ಗಜಪತಿ (ದೊರೆ), ಇನ್ನೊಂದು ದೇಗುಲ ಆಡಳಿತ ಮಂಡಳಿ, ಮತ್ತೂಂದು ದೇಗುಲ ಸೇವಕರ ಬಳಿ ಇತ್ತು. ಆದರೆ 1963ರ ಪುರಿಯ ಗಜಪತಿ ದೇಗುಲ ಹಕ್ಕು ಸ್ವಾಮ್ಯದ ಕೇಸ್‌ ಸೋತ ಬಳಿಕ ತನ್ನ ಬಳಿ ಇದ್ದ ಕೀಯನ್ನು ಜಿಲ್ಲಾಧಿಕಾರಿಗೆ ಹಸ್ತಾಂತರಿಸಿದರು ಎನ್ನಲಾಗಿದೆ

Font Awesome Icons

Leave a Reply

Your email address will not be published. Required fields are marked *