ದೆಹಲಿ: ಖ್ಯಾತ ಗಾಯಕಿ ಆಶಾ ಭೋಂಸ್ಲೆ ಸೆಪ್ಟೆಂಬರ್ 8ರ ಇಂದು 90ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ’90 ನೇ ವಯಸ್ಸಿನಲ್ಲಿ, ನಾನು ವೇದಿಕೆಯಲ್ಲಿ ಮೂರು ಗಂಟೆಗಳ ಕಾಲ ನಿಂತು ಹಾಡುಗಳನ್ನು ಹಾಡುತ್ತಿದ್ದೇನೆ. ಈ ವಯಸ್ಸಿನಲ್ಲಿ ನಾನು ಇದನ್ನು ಮಾಡಬಲ್ಲೆ ಎಂದು ನನಗೆ ಸಂತೋಷವಾಗಿದೆ’ ಎಂದು ಸಂದರ್ಶನದಲ್ಲಿ ಆಶಾ ಭೋಂಸ್ಲೆ ಹೇಳಿದರು.
80 ವರ್ಷಗಳಲ್ಲಿ ಸುಮಾರು 12,000 ಹಾಡುಗಳನ್ನು ಹಾಡಿದ್ದಾರೆ. ಮಾಧ್ಯಮವೊಂದರ ಸಂದರ್ಶನದಲ್ಲಿ ಹಲವಾರು ವಿಚಾರಗಳನ್ನು ಆಶಾ ಭೋಂಸ್ಲೆ ಹಂಚಿಕೊಂಡರು. ‘ನನಗೆ ಸಂಗೀತವೇ ನನ್ನ ಉಸಿರು. ಈ ಆಲೋಚನೆಯೊಂದಿಗೆ ನಾನು ಬದುಕುತ್ತಿದ್ದೇನೆ. ಸಂಗೀತಕ್ಕೆ ಸಾಕಷ್ಟು ಕೊಟ್ಟಿದ್ದೇನೆ. ಅನೇಕ ಬಾರಿ ನಾನು ಬದುಕಲು ಸಾಧ್ಯವಿಲ್ಲ ಎಂದು ನಾನು ಭಾವಿಸಿದ್ದೆ. ಆದರೆ ಸಂಗೀತ ನನ್ನ ಕೈ ಬಿಡಲಿಲ್ಲ . ಸಂಗೀತವು ಸದಾ ಹರಿಯುವ ನದಿಯಂತೆ ಕೊನೆಗೊಳ್ಳುವುದಿಲ್ಲ’ ಎನ್ನುತ್ತಾರೆ ಆಶಾ ಭೋಂಸ್ಲೆ.
ಕೆಲವು ದಿನಗಳ ಹಿಂದಯೆಷ್ಟೇ ಆಶಾ ಭೋಂಸ್ಲೆಯವರಿಗೆ) ರೈಸಿಂಗ್ ಇಂಡಿಯಾ She ಶಕ್ತಿ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ನವದೆಹಲಿಯಲ್ಲಿ ‘ರೈಸಿಂಗ್ ಇಂಡಿಯಾ-She ಶಕ್ತಿ’ ಸಮಾವೇಶದಲ್ಲಿ ಆಶಾ ಭೋಂಸ್ಲೆ ಅವರನ್ನು ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಗೌರವಿಸಿದ್ದರು.