ಸಖತ್‌ ಸ್ಟೈಲ್​ನಲ್ಲೇ ದೀಪಾವಳಿ ಶುಭ ಕೋರಿದ ರಜನಿಕಾಂತ್‌

ಸೂಪರ್​​ ಸ್ಟಾರ್​​ ರಜನಿಕಾಂತ್​ ಅಭಿನಯದ ‘ಜೈಲರ್​’ ಭರ್ಜರಿಯಾಗಿ ಬಾಕ್ಸ್​​ ಆಫೀಸ್​ ಕಲೆಕ್ಷನ್ ಮಾಡಿತ್ತು. ರಜನಿಕಾಂತ್ ಅವರ ಮುಂಬರುವ ಬಹುನಿರೀಕ್ಷಿತ ಸಿನಿಮಾ ಎಂದರೆ ಅದು ‘ಲಾಲ್​ ಸಲಾಂ’. ಈ ಚಿತ್ರವನ್ನು ಸೂಪರ್​​ ಸ್ಟಾರ್​​ ರಜನಿಕಾಂತ್​ ಅವರ ಪುತ್ರಿ ಐಶ್ವರ್ಯಾ ರಜನಿಕಾಂತ್​ ನಿರ್ದೇಶಿಸುತ್ತಿದ್ದಾರೆ.

ಖ್ಯಾತ ನಿರ್ಮಾಣ ಸಂಸ್ಥೆ ಲೈಕಾ ಪ್ರೊಡಕ್ಷನ್ಸ್ ಬ್ಯಾನರ್​ ಅಡಿ ‘ಲಾಲ್​ ಸಲಾಂ’ ಚಿತ್ರ ತಯಾರಾಗುತ್ತಿದೆ. ಇದೀಗ ದೀಪಾವಳಿ ಉಡುಗೊರೆಯಾಗಿ ಚಿತ್ರತಂಡ ಲಾಲ್​ ಸಲಾಂ ಚಿತ್ರದ ಟೀಸರ್​ ಬಿಡುಗಡೆ ಮಾಡಿದ್ದಾರೆ. ಈ ಚಿತ್ರವು ತಮಿಳು, ತೆಲುಗು, ಹಿಂದಿ, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

 

ಇನ್ನೂ ರಜನಿಕಾಂತ್​ ಅವರು ಲಾಲ್​ ಸಲಾಂ ಚಿತ್ರದ ಸ್ಟೈಲ್​​ನಲ್ಲಿ ದೀಪಾವಳಿ ಹಬ್ಬಕ್ಕೆ ಶುಭಕೋರಿದ್ದಾರೆ. ಸಾಮಾಜಿಕ ಜಾಲತಾಣವಾದ X ಖಾತೆಯಲ್ಲಿ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಇದೇ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.

 

Font Awesome Icons

Leave a Reply

Your email address will not be published. Required fields are marked *