‘ಟೈಗರ್​ 3’ ರಿಲೀಸ್: ಥಿಯೇಟರ್​ನಲ್ಲಿ ಪಟಾಕಿ ಸಿಡಿಸಿ ಹುಚ್ಚು ಪ್ರೇಮ ಮೆರೆದ ಫ್ಯಾನ್ಸ್​

ಮಹಾರಾಷ್ಟ್ರ: ಸಲ್ಮಾನ್​ ಖಾನ್​​ ನಟನೆಯ ‘ಟೈಗರ್​ 3’ ಸಿನಿಮಾ ಕಳೆದ ದಿನ(ನ.12) ರಿಲೀಸ್​ ಆಗಿದೆ. ಅಭಿಮಾನಿಗಳಂತೂ ಸಲ್ಲು ಸಿನಿಮಾ ಬಿಡುಗಡೆಗೊಂಡ ಸಂತಸದಲ್ಲಿ ತೇಲಾಡುತ್ತಾ ಥಿಯೇಟರ್​ನಲ್ಲೇ ಪಟಾಕಿ ಹಚ್ಚಿ ಸಂಭ್ರಮಿಸಿದ ಘಟನೆ ನಡೆದಿದೆ.

ಮಹಾರಾಷ್ಟ್ರದ ನಾಸಿಕ್​​ ಜಿಲ್ಲೆಯ ಮಾಲೆಗಾಂವ್​​ನಲ್ಲಿರುವ ಮೋಹನ್​ ಚಿತ್ರಮಂದಿರದಲ್ಲಿ ಈ ಘಟನೆ ಸಂಭವಿಸಿದೆ. ಅಭಿಮಾನಿಗಳು ಥಿಯೇಟರ್​ನಲ್ಲಿ ಪಟಾಕಿ ಸಿಡಿಸಿ ಹುಚ್ಚು ಪ್ರೇಮ ಮೆರೆದಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಇನ್ನು ಸಿನಿಮಾ ನೋಡಲು ಬಂದ ಫ್ಯಾನ್ಸ್​ ಪಟಾಕಿ ಸಿಡಿಸಿದ್ದರಿಂದ ಕಾರಣ ಅದರಿಂದ ತಪ್ಪಿಸಿಕೊಳ್ಳಲು ಓಡಾಡುತ್ತಿರುವ ದೃಶ್ಯ ಕೂಡ ಕಂಡುಬಂದಿದೆ. ಮೇಲ್ನೋಟಕ್ಕೆ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂಬ ಮಾಹಿತಿ ಹೊರಬಿದ್ದಿದೆ.

 

Font Awesome Icons

Leave a Reply

Your email address will not be published. Required fields are marked *