ಟೀಂ ಇಂಡಿಯಾವು ನ್ಯೂಜಿಲೆಂಡ್ ತಂಡವನ್ನು 70 ರನ್ನಿಂದ ಸೋಲಿಸುವ ಮೂಲಕ ಫೈನಲ್ಗೆ ಪ್ರವೇಶಿಸಿದೆ. ಹೀಗಾಗಿ ಅನೇಕ ತಾರೆಯರು ರೋಹಿತ್ ಮತ್ತು ತಂಡಕ್ಕೆ ಅಭಿನಂದನೆಯನ್ನು ಸಲ್ಲಿಸಿದ್ದಾರೆ. ಅದರ ಜೊತೆಗೆ ಮತ್ತೊಂದು ಟ್ವೀಟ್ ಮಾಡಿದ ಬಿಗ್ ಬಿ ‘ನಾನು ಪಂದ್ಯವನ್ನು ನೋಡದೆ ಇದ್ದಾಗ ಟೀಂ ಇಂಡಿಯಾ ಗೆಲ್ಲುತ್ತದೆ’ ಎಂದು ಹೇಳಿದ್ದಾರೆ.
ಕಳೆದ ದಿನ ವಾಂಖೆಡೆಯಲ್ಲಿ ನಡೆದ ಸೆಮಿಫೈನಲ್ನಲ್ಲಿ ಟೀಂ ಇಂಡಿಯಾ ಭರ್ಜರಿ ಪ್ರದರ್ಶನ ನೀಡಿದೆ. ಈ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಕೊಹ್ಲಿ, ಶ್ರೇಯಸ್ ಅಯ್ಯರ್, ಶಮಿ, ರೋಹಿತ್ ಶರ್ಮಾ ಎಲ್ಲರ ಗಮನ ಸೆಳೆದಿದ್ದರು. ಹೀಗಾಗಿ ಟೀಂ ಇಂಡಿಯಾಕ್ಕೆ ಶುಭಾಶಯಗಳ ಮಹಾಪೂರವೇ ಹರಿದುಬಂದಿತ್ತು.
ಅದರಂತೆಯೇ ಬಿಗ್ ಬಿ ಅಮಿತಾಬ್ ಬಚ್ಚನ್ ಕೂಡ ಶುಭಾಶಯ ತಿಳಿಸುವ ಮೂಲಕ, “ನಾನು ಪಂದ್ಯವನ್ನು ನೋಡದಿದ್ದಾಗ ಪಂದ್ಯ ಗೆಲ್ಲುತ್ತದೆ” ಎಂದು ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಸದ್ಯ ಅವರ ಟ್ವೀಟ್ ವೈರಲ್ ಆಗಿದೆ. ಇನ್ನು ಬಿಗ್ ಬಿ ಟ್ವೀಟ್ ನೋಡಿ ಅನೇಕರು ಕಾಮೆಂಟ್ ಬರೆದಿದ್ದಾರೆ. ಅದರಲ್ಲೊಬ್ಬ “ದಯವಿಟ್ಟು ಫೈನಲ್ ಪಂದ್ಯ ವೀಕ್ಷಿಸಬೇಡಿʼ ಎಂದು ಕಾಮೆಂಟ್ ಬರೆದಿದ್ದಾನೆ.
Dont watch final match please sir 🙏
— Lohith_Rebelified🔥🦖 (@Rebelism_18) November 15, 2023