Promotion
ಬೆಂಗಳೂರು,ನವೆಂಬರ್,17,2023(www.justkannada.in): ವಿದ್ಯುತ್ ಕಳ್ಳತನ ಆರೋಪ ಸಂಬಂಧ ಬೆಸ್ಕಾಂ ಲೆಕ್ಕಾಚಾರದಲ್ಲಿ ತಪ್ಪು. ನನಗೆ 3 ಪಟ್ಟು ಜಾಸ್ತಿ ದಂಡ ವಿಧಿಸಿದ್ದಾರೆ ಎಂದು ಬೆಸ್ಕಾಂ ವಿರುದ್ದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಆರೋಪ ಮಾಡಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ ಕುಮಾರಸ್ವಾಮಿ, ದೀಪಾವಳಿ ಸಂಧರ್ಭದಲ್ಲಿ ನಮ್ಮ ಮನೇಲಿ ಆದ ಅಚಾತುರ್ಯದ ಬಗ್ಗೆ ನಾನು ವಿಷಾದ ವ್ಯಕ್ತಪಡಿಸಿದ್ದೇನೆ. ಬೆಸ್ಕಾಂ ಇಲಾಖೆ ಅಧಿಕಾರಿಗಳು 68,526 ರೂಪಾಯಿ ದಂಡ ವಿಧಿಸಿದ್ದಾರೆ. ಬೆಸ್ಕಾಂ ಲೆಕ್ಕಾಚಾರ ಪ್ರಕಾರ 2.5 ಕಿ.ವ್ಯಾ ಬಳಕೆ ಆಗಿದೆ ಅಂತ ಇದೆ. ಬೆಸ್ಕಾಂ ಇಲಾಖೆ 2,526 ರೂಪಾಯಿ ಫೈನ್ ಹಾಕಬೇಕಿತ್ತು. ಆದರೆ 68,526 ರೂಪಾಯಿ ದಂಡ ವಿಧಿಸಿದ್ದಾರೆ. ನನಗೆ 3 ಪಟ್ಟು ಜಾಸ್ತಿ ದಂಡ ವಿಧಿಸಿದ್ದಾರೆ ಎಂದು ಕಿಡಿಕಾರಿದರು.
ನಮ್ಮ ಮನೆಗೆ 33 ಕಿಲೋ ವ್ಯಾಟ್ ವಿದ್ಯುತ್ ಬಳಕೆಗೆ ಅನುಮತಿ ಇದೆ ನಾನು ನಿತ್ಯ ಉಪಯೋಗ ಮಾಡುವ ಕರೆಂಟ್ ಇದು. ಮನೆಗೆ ತೆಗೆದುಕೊಂಡಿರುವ 33 ಕೆವಿ ಸೇರಿ 68 ಸಾವಿರ ರೂ. ಹಾಕಿದ್ದಾರೆ. ಒಬ್ಬ ಮಾಜಿ ಸಿಎಂಗೆ ಹೀಗೆ ಆದರೆ ಸಾಮಾನ್ಯ ಜನರಿಗೆ ಕಥೆ ಏನು?. ನಾನು ವಿದ್ಯುತ್ ಮಹಜರು ಕಾಪಿ ನೀಡುವಂತೆ ಕೇಳಿದ್ದೇನೆ. ನನಗೆ ಕರೆಂಟ್ ಕಳ್ಳ ಅಂತ ಲೇಬಲ್ ಬೇರೆ ಕೊಟ್ಟಿದ್ದಾರೆ ಎಂದು ಹೆಚ್.ಡಿಕೆ ಅಸಮಾಧಾನ ವ್ಯಕ್ತಪಡಿಸಿದರು.
Key words: BESCOM – mistake – calculation-fined – former CM -HD Kumaraswamy