ಮುಂಬೈ: ಬಾಲಿವುಡ್ ಕ್ವೀನ್ ಐಶ್ವರ್ಯ ರೈ ಹಾಗೂ ನಟ ಅಭಿಷೇಕ್ ಬಚ್ಚನ್ ಅವರ ಪುತ್ರಿ ಆರಾಧ್ಯ ಬಚ್ಚನ್ಗೆ ಇಂದು 12ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 2011ರ ನವೆಂಬರ್ 17ರಂದು ಹುಟ್ಟಿರುವ ಆರಾಧ್ಯ ಈಗ ಸೆಲೆಬ್ರಿಟಿ ಪುತ್ರಿ. ಇಂದು ಈಕೆಯ ಹುಟ್ಟುಹಬ್ಬದ ಸಂದರ್ಭದಲ್ಲಿ ಅಪ್ಪ ಅಭಿಷೇಕ್ ಹಾಗೂ ತಾಯಿ ಐಶ್ವರ್ಯ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ, ಮಗಳ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದಾರೆ.ಇದೀಗ ಈ ಪೋಸ್ಟ್ ವೈರಲ್ ಆಗಿದೆ.
ಐಶ್ವರ್ಯ ರೈ ಅವರು ಮಗಳ ಜೊತೆಗಿನ ಹಳೆಯ ಫೋಟೋ ಒಂದನ್ನು ಶೇರ್ ಮಾಡಿದ್ದಾರೆ. ನಾನು ನಿನ್ನನ್ನು ಅನಂತವಾಗಿ, ಬೇಷರತ್ತಾಗಿ, ಶಾಶ್ವತವಾಗಿ ಪ್ರೀತಿಸುತ್ತೇನೆ. ನೀನೇ ನನ್ನ ಪ್ರಿಯ ಏಂಜೆಲ್, ನಿನ್ನನ್ನು ಅಪಾರವಾಗಿ ಪ್ರೀತಿಸುತ್ತೇನೆ. ನೀನೇ ನನ್ನ ಆತ್ಮ ಎಂದಿರುವ ಐಶ್ವರ್ಯ ಪುತ್ರಿಯ ಮೇಲೆ ಮಮತೆ ಹೊಳೆಯನ್ನೇ ಹರಿಸಿದ್ದಾರೆ. ಅದೇ ವೇಳೆ ಅಪ್ಪ ಅಭಿಷೇಕ್ ಬಚ್ಚನ್ ಕೂಡ ಶುಭಾಶಯ ಕೋರಿದ್ದು, ನನ್ನ ಮುದ್ದು ರಾಜಕುಮಾರಿಗೆ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ್ದಾರೆ.
ಇದೇ ವೇಳೆ ಆರಾಧ್ಯಳ ಬಗ್ಗೆಯೂ ಸರ್ಚ್ ಮಾಡಿದ್ದಾರೆ. ಈ ಹಿಂದೆ ಆರಾಧ್ಯಳ ಶಾಲೆಯ ಶುಲ್ಕದ ವಿಷಯ ಸಖತ್ ಸುದ್ದಿಯಾಗಿತ್ತು. ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಅವರ ಮಗಳು ಆರಾಧ್ಯ ಬಚ್ಚನ್ ಅವರು ದೇಶದ ಅತ್ಯಂತ ದುಬಾರಿ ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿದ್ದಾಳೆ. ಧೀರೂಭಾಯಿ ಅಂಬಾನಿ ಇಂಟರ್ನ್ಯಾಷನಲ್ ಶಾಲೆಯಲ್ಲಿ 8ನೇ ತರಗತಿ ಈಕೆ ಓದುತ್ತಿದ್ದು, ಈ ಶಾಲೆಯಲ್ಲಿ ಎಲ್‌ಕೆಜಿಯಿಂದ 7ನೇ ತರಗತಿವರೆಗಿನ ಫೀಸ್ 1.70 ಲಕ್ಷ ರೂ., 8-10ನೇ ತರಗತಿಗೆ 4.48 ಲಕ್ಷ ರೂ. ಫೀಸ್ ಮತ್ತು 11 ಮತ್ತು 12ನೇ ತರಗತಿ 9.65 ಲಕ್ಷ ರೂ. ಶುಲ್ಕ ಇದೆ ಎನ್ನಲಾಗಿದೆ.