ವಾರಣಾಸಿ: ಸನ್ನಿ ಲಿಯೋನ್ ಗುರುವಾರ (ನ.16)ರಂದು ವಾರಣಾಸಿಯಲ್ಲಿ ಗಂಗಾ ಆರತಿಯಲ್ಲಿ ಪಾಲ್ಗೊಂಡರು.
ಪಿಂಕ್ ಸಲ್ವಾರ್ ಸೂಟ್ನಲ್ಲಿ ಸನ್ನಿ ಮಾಜಿ ಐಎಎಸ್ ಅಧಿಕಾರಿ ಅಭಿಷೇಕ್ ಸಿಂಗ್, ಅರ್ಚಕ ಮತ್ತು ಇತರರೊಂದಿಗೆ ಗಂಗಾ ಆರತಿಯಲ್ಲಿ ಪಾಲ್ಗೊಂಡಿರುವ ವಿಡಿಯೊವನ್ನು ಎಎನ್ಐ ಹಂಚಿಕೊಂಡಿದೆ. ಕುತ್ತಿಗೆಗೆ ಮಾಲೆ, ತಲೆಯ ಮೇಲೆ ದುಪಟ್ಟಾ, ಹಣೆಯ ಮೇಲೆ ಬೊಟ್ಟು ಧರಿಸಿದ್ದ ಸನ್ನಿಯ ಈ ವಿಡಿಯೊ ವೈರಲ್ ಆಗಿದೆ.
ಗುರುವಾರವೇ ವಾರಣಾಸಿಗೆ ತೆರಳಿದ್ದ ಅವರು, ರಾತ್ರಿವರೆಗೂ ಅಲ್ಲೇ ಇದ್ದು, ಪ್ರಸಿದ್ಧ ಗಂಗಾ ಆರತಿಯಲ್ಲಿ ಭಾಗಿಯಾಗಿದ್ದರು. ಸನ್ನಿ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಗಂಗಾ ಆರತಿಯ ವಿಡಿಯೊವನ್ನು ಹಂಚಿಕೊಂಡಿದ್ದಾರೆ.
“ವಾರಣಾಸಿಯಲ್ಲಿ ಗಂಗಾ ಆರತಿಯನ್ನು ನೋಡುವುದು ಅತ್ಯಂತ ಅದ್ಭುತ ಅನುಭವʼʼಎಂದು ಕ್ಯಾಪ್ಷನ್ ನೀಡಿದ್ದಾರೆ. ವಿಡಿಯೊದಲ್ಲಿ ಬಿಳಿ ಕುರ್ತಾ ಪೈಜಾಮದಲ್ಲಿ ಕಾಣಿಸಿಕೊಂಡಿರುವ ಅಭಿಷೇಕ್ ಸಿಂಗ್ ಅವರೊಂದಿಗೆ ಸನ್ನಿ ಗಂಗಾ ಆರತಿಯಲ್ಲಿ ಪಾಲ್ಗೊಂಡರು.