ಚೆನ್ನೈ: ತ್ರಿಷಾ ಬಗ್ಗೆ ತಮಿಳಿನ ಖಳನಟ ಮನ್ಸೂರ್ ಅಲಿ ಖಾನ್ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಅವರು ಕ್ಷಮೆ ಕೇಳಬೇಕೆಂದು ಒತ್ತಾಯ ಕೇಳಿ ಬಂದಿತ್ತು. ಆದ್ರೆ ಈ ಬಗ್ಗೆ ಚೆನ್ನೈನಲ್ಲಿ ಮಾಧ್ಯಮಗೋಷ್ಠಿ ನಡೆಸಿರುವ ಮನ್ಸೂರ್ ಅಲಿ ಖಾನ್ ಯಾವುದೇ ಕಾರಣಕ್ಕೂ ಕ್ಷಮೆ ಕೇಳುವುದಿಲ್ಲ ಎಂದು ಹೇಳಿದ್ದಾರೆ.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಮನ್ಸೂರ್ ಅಲಿ ಖಾನ್, ನಾನು ನೀಡಿರುವ ಹೇಳಿಕೆಗೆ ಕ್ಷಮೆ ಕೇಳುವುದಿಲ್ಲ. ಚಲನಚಿತ್ರ ಸಂಸ್ಥೆಯಾದ ನಾಡಿಗರ ಸಂಗಮ ತಾತ್ಕಾಲಿಕವಾಗಿ ನನ್ನನ್ನು ನಿಷೇಧಿಸಿ ತಪ್ಪು ಮಾಡುತ್ತಿದೆ. ಕ್ಷಮೆ ಕೇಳುವವರಿಗೆ ಸೇರ್ಪಡೆ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದೆ. ಆದ್ರೆ ಇದನ್ನು ಅವರು ಹಿಂತೆಗೆದುಕೊಳ್ಳಬೇಕು. ಈ ರೀತಿ ಸಮಸ್ಯೆ ಬಂದಾಗ ನನ್ನನ್ನು ವಿಚಾರಿಸದೆ ಬ್ಯಾನ್ ಮಾಡಿದ್ದಾರೆ. ಇಲ್ಲದಿದ್ದರೇ ಫೋನ್ ಕರೆ ಮಾಡಿ ಏನು ಅಂತ ಕೇಳಬೇಕಿತ್ತು.
ಅಥವಾ ಕೊನೆಗೆ ನೋಟಿಸ್ ಆದ್ರೂ ನೀಡಬೇಕಿತ್ತು. ಆದ್ರೆ ಈ ಯಾವುದನ್ನು ಮಾಡದೇ ನಿಷೇಧ ಮಾಡಿರುವುದು ತಪ್ಪು. ಇದನ್ನು ಹಿಂತೆಗೆದುಕೊಳ್ಳಬೇಕು ಎಂದಿದ್ದಾರೆ. ಅಲ್ಲ್ದೆ ನಾನು ಯಾರೆಂದು ಜನರಿಗೆ ತಿಳಿದಿದೆ. ತಮಿಳರ ಬೆಂಬಲವಿದೆ ಎಂದು ಹೇಳಿದ್ದಾರೆ.