ಮುಂಬೈ: ರಿಲೀಸ್ ಗೆ ಮೊದಲೇ ಸಾಕಷ್ಟು ಕುತೂಹಲ ಕೆರಳಿಸಿದ್ದ ರಣಬೀರ್ ಕಪೂರ್ ಹಾಗೂ ರಶ್ಮಿಕಾ ಮಂದಣ್ಣ ನಟನೆಯ ‘ಅನಿಮಲ್’ ಸಿನಿಮಾ ಬ್ಲಾಕ್ಬಸ್ಟರ್ ಹಿಟ್ ಆಗುವ ಸೂಚನೆ ಸಿಕ್ಕಿದೆ.
ಡಿಸೆಂಬರ್ 1ರಂದು ರಿಲೀಸ್ ಆದ ಈ ಸಿನಿಮಾ ಮೊದಲ ದಿನ 60 ಕೋಟಿ ರೂಪಾಯಿ ಗಳಿಕೆ ಮಾಡಿದೆ. ರಣಬೀರ್ ಕಪೂರ್ ಹಾಗೂ ರಶ್ಮಿಕಾ ಮಂದಣ್ಣ ಅವರ ವೃತ್ತಿ ಜೀವನದಲ್ಲೇ ಮೊದಲ ದಿನ ಇಷ್ಟು ದೊಡ್ಡ ಗಳಿಕೆ ಆಗಿದ್ದು ಇದೇ ಮೊದಲು. ಮುಂದಿನ ದಿನಗಳಲ್ಲಿ ಸಿನಿಮಾ ಅಬ್ಬರದ ಗಳಿಕೆ ಮಾಡುವ ಸಾಧ್ಯತೆ ಇದೆ.
ರಣಬೀರ್ ಕಪೂರ್ ನಟನೆಯ ‘ಅನಿಮಲ್’ ಸಿನಿಮಾ ಹಿಂದಿ, ತೆಲುಗು, ಕನ್ನಡ ಸೇರಿ ಐದು ಭಾಷೆಗಳಲ್ಲಿ ರಿಲೀಸ್ ಆಗಿದೆ. ಆರಂಭಿಕ ವರದಿಗಳ ಪ್ರಕಾರ ಈ ಚಿತ್ರ ಹಿಂದಿಯಲ್ಲಿ 50.50 ಕೋಟಿ ರೂಪಾಯಿ ಬಾಚಿಕೊಂಡಿದೆ. ತೆಲುಗು ವರ್ಷನ್ನಿಂದ 10 ಕೋಟಿ ರೂಪಾಯಿ ಆಗಿದೆ. ಉಳಿದ ಭಾಷೆಗಳಿಂದ 50 ಲಕ್ಷ ರೂಪಾಯಿ ಗಳಿಕೆ ಆಗಿದೆ. ‘ಅನಿಮಲ್’ ಸಿನಿಮಾಗೆ ಸಂದೀಪ್ ರೆಡ್ಡಿ ವಂಗ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ರಣಬೀರ್, ರಶ್ಮಿಕಾ ಮಂದಣ್ಣ, ಬಾಬಿ ಡಿಯೋಲ್ ನಟಿಸಿದ್ದಾರೆ.