ಮುಂಬೈ: ಪಾರ್ಲೆಜಿ ಬಿಸ್ಕೆಟ್ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ..ಮಕ್ಕಳಿಂದ ಹಿಡಿದು ವೃದ್ಧರ ವರೆಗೂ ಎಲ್ಲರೂ ಇದನ್ನು ಇಷ್ಟಪಟ್ಟು ತಿನ್ನುತ್ತಾರೆ. 80-90ರ ದಶಕಗಳಲ್ಲಿ ಹುಟ್ಟಿ ಬೆಳದವರ ನೆಚ್ಚಿನ ಬಿಸ್ಕೆಟ್ಗಳಲ್ಲಿ ಒಂದು ಈ ಪಾರ್ಲೆ-ಜಿ. ಪ್ರತಿದಿನ ಬೆಳಿಗ್ಗೆ ಚಾಯ್ ಅಥವಾ ಟೀ ಜೊತೆ ಪಾರ್ಲೆ-ಜಿ ಬಿಸ್ಕೆಟ್ ಬೇಕು ಎಂದು ಜನರು ಹೇಳುವ ಕಾಲವೊಂದಿತ್ತು. ಏಕೆಂದರೆ ಈ ಬಿಸ್ಕತ್ತುಗಳು ಬಾಲ್ಯದಿಂದಲೂ ಪ್ರತಿಯೊಬ್ಬ ಭಾರತೀಯರ ಮೆಚ್ಚಿನವುಗಳಾಗಿವೆ. ಅದರಲ್ಲೂ ಪಾರ್ಲೆ ಜಿ ಬಿಸ್ಕೆಟ್ ಪ್ಯಾಕೆಟ್ನಲ್ಲಿರುವ ಪುಟ್ಟ ಬಾಲಕಿಯ ಪೋಟೋ ಎಲ್ಲರಿಗೂ ಅಚ್ಚುಮೆಚ್ಚು.
ಪಾರ್ಲೆ ಜಿ ಬಿಸ್ಕೆಟ್ ಪ್ಯಾಕೆಟ್ನ್ನು ಆ ಪುಟ್ಟ ಮಗುವಿನ ಫೋಟೋವಿಲ್ಲದೆ ಊಹಿಸುವುದು ಸಹ ಕಷ್ಟ. ಅಷ್ಟರ ಮಟ್ಟಿಗೆ ಹಳದಿ ಬಣ್ಣದ ರ್ಯಾಪರ್ನಲ್ಲಿ ಪುಟ್ಟ ಮಗುವಿನ ಚಿತ್ರ ಮನಸ್ಸಿನಲ್ಲಿ ಅಚ್ಚೊತ್ತಿ ಬಿಟ್ಟಿದೆ. ಆದ್ರೆ ಇತ್ತೀಚಿಗೆ ಪಾರ್ಲೆ-ಜಿ ಐಕಾನಿಕ್ ಹುಡುಗಿಯ ಚಿತ್ರವನ್ನು ಈ ಇನ್ಸ್ಟಾಗ್ರಾಮ್ ಪ್ರಭಾವಶಾಲಿ ಮುಖದೊಂದಿಗೆ ಬದಲಾಯಿಸಿದೆ.
ಕಂಟೆಂಟ್ ಕ್ರಿಯೇಟರ್ ಝೆರ್ವಾನ್ ಜೆ ಬುನ್ಶಾ, ಈ ವೀಡಿಯೋವನ್ನು ಮಾಡಿದ್ದು, ಎಲ್ಲೆಡೆ ವೈರಲ್ ಆಗಿದೆ. ವೀಡಿಯೋದಲ್ಲಿ ಅವರು, ‘ನೀವು ಪಾರ್ಲೆ ಮಾಲೀಕರನ್ನು ಭೇಟಿಯಾದರೆ, ಅವರನ್ನು ಪಾರ್ಲೆ ಸರ್, ಮಿ. ಪಾರ್ಲೆ ಅಥವಾ ಪಾರ್ಲೆ ಜಿ ಹೇಗೆ ಕರೆಯುತ್ತೀರಿ’ ಎಂದು ಪ್ರಶ್ನಿಸಿದ್ದಾರೆ. ಬುನ್ಶಾಹ್ ಫೋಟೋ ಇರುವ ಪಾರ್ಲೆ-ಜಿ ಪ್ಯಾಕೆಟ್ ಫೋಟೋವನ್ನು ಪೋಸ್ಟ್ ಮಾಡಲಾಗಿದೆ. ಬುನ್ಶಾಹ್ ಕಾರಿನಲ್ಲಿ ಗೊಂದಲದ ಮುಖದೊಂದಿಗೆ ಕುಳಿತಿರುವುದು ಕಂಡುಬರುತ್ತದೆ. ಈ ವೀಡಿಯೋ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ನೆಟ್ಟಿಗರು ಇದಕ್ಕೆ ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ.