ಬೀದರ್: ಮಾಜಿ ಗ್ರಾಮ ಪಂಚಾಯತ್ ಸದಸ್ಯರೊಬ್ಬರನ್ನ ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆಗೈದ ಘಟನೆ ಬೀದರ್ ತಾಲೂಕಿನ ನಿರ್ಣಾ ವಾಡಿಯಲ್ಲಿ ನಡೆದಿದೆ. ಮಲ್ಲಿಕಾರ್ಜುನ ರಾಜಗೀರೆ(48) ಕೊಲೆಯಾದವರಾಗಿದ್ದಾರೆ.
ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಮಲ್ಲಿಕಾರ್ಜುನ ರಾಜಗೀರೆ ಕೊಲೆಯಾಗಿದೆ ಎಂದು ತಿಳಿದು ಬಂದಿದೆ.
ಮಲ್ಲಿಕಾರ್ಜುನ ರಾಜಗೀರೆ ಮಗ ನೀಲಕಂಠ ರಾಕಗೀರೆಗೆ ಗಾಯವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಜಮೀನು ಸರ್ವೇ ಸಂಬಂಧ ಗಲಾಟೆ ನಡೆದಿದೆ. ಅಧಿಕಾರಿಗಳು ಸರ್ವೇ ಮಾಡಿ ಹೋದ ಬಳಿ ಫಿನಿಷಿಂಗ್ ಮಾಡಿಕೊಳ್ಳುವ ಸಂಬಂಧ ಗಲಾಟೆ ಆರಂಭವಾಗಿದೆ.
ಕಳೆದ ಅನೇಕ ವರ್ಷಗಳಿಂದ ಹೊಲದ ಕಟ್ಟೆಯ ವಿಷಯಕ್ಕೆ ಸಂಬಂಧಿಸಿದಂತೆ ವಿವಾದವಿತ್ತು ಹೇಳಲಾಗುತ್ತಿದೆ. ಈ ಕುರಿತು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.