ಮೊಬೈಲ್ ಕಳ್ಳತನ ಮಾಡಿ ಆನ್​ಲೈನ್ ಆ್ಯಪ್ ಮೂಲಕ ಹಣ ವರ್ಗಾವಣೆ

ಗದಗ: ಪ್ರಾಂಶುಪಾಲರ ಮೊಬೈಲ್ ಕಳ್ಳತನ ಮಾಡಿದ ದುಷ್ಕರ್ಮಿಗಳು ಮೊಬೈಲ್​ನ ಆನ್​ಲೈನ್ ಆ್ಯಪ್ ಮೂಲಕ ₹1.40 ಲಕ್ಷ ಹಣ ವರ್ಗಾವಣೆ ಮಾಡಿಕೊಂಡ ಘಟನೆ ನರಗುಂದ ಪಟ್ಟಣದ ಬಸ್ ನಿಲ್ದಾಣದಲ್ಲಿ ನಡೆದಿದೆ.

ಪ್ರಾಂಶುಪಾಲರಾದ ಶ್ರೀಕಾಂತ ಕೃಷ್ಣಾಜಿ ಜೋಷಿ ಅವರು ಎಂದಿನಂತೆ ಕಾಲೇಜ್​​ಗೆ ತೆರಳುತ್ತಿದ್ದ ವೇಳೆ  ಬಸ್ ನಿಲ್ದಾಣದಲ್ಲಿ ದುಷ್ಕರ್ಮಿಗಳು 20 ಸಾವಿರ ಮೌಲ್ಯದ ಮೊಬೈಲ್​ ಅನ್ನು ಪ್ರಾಂಶುಪಾಲರ ಜೇಬಿನಿಂದ ಕಳ್ಳತನ ಮಾಡಿದ್ದಾರೆ.

ಬಳಿಕ ಮೊಬೈಲ್​​ನಲ್ಲಿದ್ದ ಎಸ್​​ಬಿಐ ಖಾತೆಯ ಯುಪಿಐ ಬಳಸಿಕೊಂಡು ಬರೋಬ್ಬರಿ 1 ಲಕ್ಷದ 40 ಸಾವಿರ ರೂಗಳನ್ನ ತಮ್ಮ ಅಕೌಂಟ್​ಗೆ ವರ್ಗಾವಣೆ ಮಾಡಿಕೊಂಡಿದ್ದಾರೆ.

ಮೊದಲು ₹75 ಸಾವಿರ, ₹50 ಸಾವಿರ ಹಾಗೂ ₹15 ಸಾವಿರ ಎಂಬಂತೆ ಒಟ್ಟು ಮೂರು ಹಂತದಲ್ಲಿ ಹಣ ವರ್ಗಾವಣೆ ಮಾಡಿಕೊಂಡಿದ್ದಾರೆ.

ಈ ಸಂಬಂಧ ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Font Awesome Icons

Leave a Reply

Your email address will not be published. Required fields are marked *