ಹುಬ್ಬಳ್ಳಿ: ಕ್ರಿಕೆಟ್ ಅಸೋಸಿಯೇಷನ್ ಫಾರ್ ಬ್ಲೈಂಡ್ ಇನ್ ಇಂಡಿಯಾ ಆಯೋಜಿಸಿದ್ದ ಅಂಧ ಮಹಿಳೆಯರ ರಾಷ್ಟ್ರೀಯ T20 ಕ್ರಿಕೆಟ್ ಟೂರ್ನಿಯಲ್ಲಿ ಒಡಿಶಾ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಹುಬ್ಬಳ್ಳಿಯ ದೇಶಪಾಂಡೆನಗರ ಕೆಜಿಎ ಮೈದಾನದಲ್ಲಿ ನಡೆದ ಫೈನಲ್‌ನಲ್ಲಿ ಒಡಿಶಾ , ಆತಿಥೇಯ ಕರ್ನಾಟಕ ತಂಡದ ವಿರುದ್ಧ 6 ವಿಕೆಟ್‌ಗಳ ಜಯ ಸಾಧಿಸಿ, ಟ್ರೋಫಿ ತನ್ನದಾಗಿಸಿಕೊಂಡಿತು.
ಇದರೊಂದಿಗೆ ಚಾಂಪಿಯನ್ ತಂಡ 1.04 ಲಕ್ಷ ರೂ. ಹಾಗೂ ರನ್ನರ್ ಅಪ್ ತಂಡ 80 ಸಾವಿರ ರೂ. ನಗದು ಬಹುಮಾನ ಪಡೆಯಿತು.
ಮೊದಲು ಬ್ಯಾಟ್ ಮಾಡಿದ ಕರ್ನಾಟಕ 18.3 ಓವರ್‌ಗಳಲ್ಲಿ 93 ರನ್‌ಗಳಿಗೆ ಆಲೌಟ್ ಆಯಿತು. ಈ ರನ್ ಗುರಿ ಬೆನ್ನತ್ತಿದ್ದ ಒಡಿಶಾ 13.1 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 94 ರನ್ ಗಳಿಸಿ ಜಯ ಸಾಧಿಸಿತು.
ಒಡಿಶಾ ತಂಡದ ಜಿಲಿ ಬಿರುವಾ ಫೈನಲ್ ಪಂದ್ಯದ ಆಟಗಾರ್ತಿ, ಬಿ-1 ವಿಭಾಗದಲ್ಲಿ ರಾಜಸ್ಥಾನದ ಸಿಮು ದಾಸ್, ಬಿ-2 ವಿಭಾಗದಲ್ಲಿ ದೆಹಲಿಯ ಮೆಂಕಾ ಕುಮಾರಿ ಹಾಗೂ ಬಿ-3 ವಿಭಾಗದಲ್ಲಿ ಜಿಲಿ ಬಿರುವಾ ಸರಣಿಶ್ರೇಷ್ಠ ಪ್ರಶಸ್ತಿ ಪಡೆದರು.
ಟೂರ್ನಿಯಲ್ಲಿ 16 ತಂಡಗಳು ಪಾಲ್ಗೊಂಡಿದ್ದವು.