ಮಾರಿಷಸ್: ಅಯೋಧ್ಯೆಯಲ್ಲಿ ರಾಮನ ಪ್ರತಿಷ್ಠಾಪನೆ ಜ.22 ರಂದು ನಡೆಯಲಿದೆ. ಈ ಕಾರ್ಯಕ್ರಮ ವೀಕ್ಷಿಸಲು ಮಾರಿಷಸ್ ಸರ್ಕಾರವು ಹಿಂದೂ ಧರ್ಮೀಯ ಉದ್ಯೋಗಿಗಳಿಗೆ 2 ಗಂಟೆಗಳ ವಿಶೇಷ ಸಮಯಾವಕಾಶ ನೀಡುವುದಾಗಿ ಪ್ರಕಟಿಸಿದೆ.
ಜ.22 ರಂದು ಎರಡು ಗಂಟೆಗಳ ವಿರಾಮ ನೀಡಬೇಕೆಂದು ಹಿಂದೂ ಸಾಮಾಜಿಕ-ಸಾಂಸ್ಕೃತಿಕ ಸಂಸ್ಥೆಗಳ ಮನವಿಗೆ ಮಾರಿಷಸ್ ಸರ್ಕಾರ ಒಪ್ಪಿಗೆ ನೀಡಿದೆ.
ಮಾರಿಷಸ್‌ನನಲ್ಲಿ ಹಿಂದೂ ಧರ್ಮವು ಪ್ರಮುಖ ಸ್ಥಾನವನ್ನು ಹೊಂದಿದೆ. 2011ರ ಅಂಕಿಅಂಶಗಳ ಪ್ರಕಾರ ಹಿಂದೂಗಳು ಸರಿಸುಮಾರು 48.5 ಪ್ರತಿಶತ ಜನಸಂಖ್ಯೆ ಹೊಂದಿದ್ದಾರೆ.