ಬೆಂಗಳೂರು : ಬೆಟ್ಟಿಂಗ್ ಮತ್ತು ಶೇಕಡ 28ರಷ್ಟು ಜಿಎಸ್ಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ರೇಸ್ ಕೋರ್ಸ್ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿದ್ದಾರೆ.
ಈ ಕುರಿತು ಬೆಂಗಳೂರು ಕಮಿಷನರ್ ಬಿ. ದಯಾನಂದ್ ಮಾಹಿತಿ ನೀಡಿದ್ದಾರೆ. ಇನ್ನು ಯಾವುದೇ ದಾಖಲೆ ಇಲ್ಲದೇ ಹಣದ ವ್ಯವಹಾರ ನಡೆಸಲಾಗ್ತಿದೆ ಎಂದು ಮಾಹಿತಿ ಬಂದಿತ್ತು. ಹಾಗಾಗಿ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದು, 3.45 ಕೋಟಿ ನಗದು ಜಪ್ತಿ ಮಾಡಲಾಗಿದೆ ಎಂದು ತಿಳಿಸಿದರು. 66 ಜನರಿಂದ ಮಾಹಿತಿ ಪಡೆದು ನೋಟಿಸ್ ನೀಡಿದ್ದೇವೆ. ಇನ್ನು ಸಿಆರ್ಪಿ ಸೆಕ್ಷನ್ 41ರ ಅಡಿ ನೋಟಿಸ್ ನೀಡಲಾಗಿದೆ. ಸಧ್ಯ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸಲಾಗ್ತಿದೆ” ಎಂದು ತಿಳಿದರು.