ನೇಲ್ ಪಾಲಿಶ್ ರಿಮೂವರ್ ಕುಡಿಸಿ ಮಗು ಹತ್ಯೆಗೈದಿದ್ದ ಮಹಿಳೆ ಬಂಧನ

ವಾಷಿಂಗ್ಟನ್: ಅಮೆರಿಕಾದಲ್ಲಿ ಓರ್ವ ಮಹಿಳೆ ತನ್ನ ಗೆಳೆಯನ 18 ತಿಂಗಳ ಮಗುವಿಗೆ ನೇಲ್ ಪಾಲಿಶ್ ರಿಮೂವರ್ ಹಾಗೂ ಸಣ್ಣ ಸ್ಕ್ರೂಗಳನ್ನು ತಿನ್ನಿಸಿ ಹತ್ಯೆಗೈದ ಘಟನೆ ಸಂಭವಿಸಿದೆ.

ಸದ್ಯ ಅಲಿಸಿಯಾ ಓವೆನ್ಸ್ (20) ಎಂಬ ಮಹಿಳೆಯನ್ನು ಬಂಧಿಸಲಾಗಿದೆ. ಮಹಿಳೆ 2023ರ ಜೂನ್‍ನಲ್ಲಿ ತನ್ನ ಗೆಳೆಯನ ಮಗುವಿಗೆ ನೇಲ್ ಪಾಲಿಶ್, ಸ್ಕ್ರೂ ಹಾಗೂ ಬಟನ್ ಆಕಾರದ ಬ್ಯಾಟರಿಗಳನ್ನು ತಿನ್ನಿಸಿ ಹತ್ಯೆಗೈದಿದ್ದಳು.

ಮಗುವಿಗೆ ಇದ್ದಕ್ಕಿದ್ದಂತೆ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡಿತ್ತು. ಬಳಿಕ ಮಗುವನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಾಲ್ಕು ದಿನಗಳ ಬಳಿಕ ಮಗು ಚಿಕಿತ್ಸೆ ಫಲಿಸದೆ ಮೃತಪಟ್ಟಿತ್ತು. ಶವಪರೀಕ್ಷೆಯ ಬಳಿಕ ಮಗುವಿನ ಹೊಟ್ಟೆಯಲ್ಲಿ ಬಟನ್ ಆಕಾರದ ಬ್ಯಾಟರಿಗಳು ಮತ್ತು ಸ್ಕ್ರೂಗಳು ಸಿಕ್ಕಿದ್ದವು. ಅಲ್ಲದೇ ನೇಲ್ ಪಾಲಿಶ್ ಕುಡಿಸಿರುವುದು ತಿಳಿದು ಬಂದಿದೆ.

Font Awesome Icons

Leave a Reply

Your email address will not be published. Required fields are marked *