ವಿಜಯಪುರ: ಬ್ಯಾಂಕಾಕ್ನ ಖೋಯಾಯ್ ಎಂಬಲ್ಲಿ ನಮೋ ಸ್ಕೈಡೈವರ್ಸ್ ಎಂಬ ಈ ನಾಲ್ವರ ತಂಡ 13 ಸಾವಿರ ಅಡಿ ಎತ್ತರದಿಂದ ಸ್ಕೈಡೈವಿಂಗ್ ಮಾಡುವಾಗ ರಾಮಮಂದಿರ, ಜೈ ಶ್ರೀರಾಮ್ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ಬ್ಯಾನರ್ ಹಿಡಿದು, ಜೈಶ್ರೀರಾಮ್ ಘೋಷಣೆ ಕೂಗಿ ತಮ್ಮ ಸಂಭ್ರಮವನ್ನು ವ್ಯಕ್ತಪಡಿಸಿದ್ದಾರೆ.
ನಗರದ ರಾಮನ ಪರಮ ಭಕ್ತರಾದ ಉದ್ಯಮಿ ರಾಜಶೇಖರ ಮುತ್ತಿನಪೆಂಡಿಮಠ ಈ ಸಾಹಸ ಮೆರೆದಿದ್ದು, ಇವರ ಜೊತೆ ಇವರ ಸ್ನೇಹಿತರಾದ ಬೆಂಗಳೂರಿನ ರಾಹುಲ್ ಡಾಕ್ರೆ, ಅನುಭವ ಅಗರವಾಲ್ ಹಾಗೂ ಮಹಾರಾಷ್ಟ್ರದ ಹಿಮಾನಶೂ ಸಾಬಳೆ ಸಾಥ್ ನೀಡಿದ್ದಾರೆ.
ರಾಮ ಭಕ್ತರ 500 ವರ್ಷಗಳ ಕನಸು ನನಸಾಗುತ್ತಿರುವ ಈ ಸಮಯದಲ್ಲಿ, ದೇಶದೆಲ್ಲೆಡೆ ರಾಮನ ಭಕ್ತರು ನಾನಾ ರೀತಿಯಲ್ಲಿ ಭಕ್ತಿ ಪ್ರದರ್ಶಿಸುತ್ತಿದ್ದಾರೆ. ಬೆಂಗಳೂರಿನ ಮಾಲ್ಗಳಲ್ಲಿ ರಾಮನ ರಂಗೋಲಿ ಬಿಡಿಸಿದ್ದು ಸುದ್ದಿಯಾಗಿತ್ತು.