ನವದೆಹಲಿ: ಅಯೋಧ್ಯೆಯಲ್ಲಿ ನಡೆಯಲಿರುವ ರಾಮ ಮಂದಿರದ ಪ್ರಾಣ ಪ್ರತಿಷ್ಠಾ ಸಮಾರಂಭದಲ್ಲಿ ಭಾಗವಹಿಸಲು ಭಾರತದ ಮಾಜಿ ನಾಯಕ ಎಂಎಸ್ ಧೋನಿಗೆ ಆಹ್ವಾನ ದೊರಕಿದೆ.
ಭಾರತದ ಕ್ರಿಕೆಟ್ ದಂತಕಥೆಗಳಾದ ವಿರಾಟ್ ಕೊಹ್ಲಿ ಮತ್ತು ಸಚಿನ್ ತೆಂಡೂಲ್ಕರ್ ಅವರಿಗೂ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದಿಂದ ಆಹ್ವಾನ ಸಿಕ್ಕಿತ್ತು. ಅಂತೆಯೇ ಧೋನಿ ಜನವರಿ 15ರಂದು ಆಹ್ವಾನ ಸ್ವೀಕರಿಸಿದ್ದಾರೆ.
22ರಂದು ನಡೆಯಲಿರುವ ಈ ಉನ್ನತ ಮಟ್ಟದ ಧಾರ್ಮಿಕ ಕಾರ್ಯಕ್ರಮದಲ್ಲಿ ಕ್ರೀಡೆ, ಬಾಲಿವುಡ್ ಮತ್ತು ರಾಜಕೀಯದ ಹಲವಾರು ಪ್ರಮುಖ ಭಾರತೀಯ ವ್ಯಕ್ತಿಗಳು ಭಾಗವಹಿಸುವ ನಿರೀಕ್ಷೆಯಿದೆ.
ಎಂಎಸ್ ಧೋನಿ ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 2024) ಮೂಲಕ ಮೈದಾನಕ್ಕೆ ಮರಳಲು ಸಜ್ಜಾಗಿದ್ದಾರೆ.
MS Dhoni has been invited for Pran Pratishtha of Lord Rama at the Ram Temple in Ayodhya. pic.twitter.com/TAS4vf34Ce
— Mufaddal Vohra (@mufaddal_vohra) January 15, 2024