ಭಾರತದ ಈ ನಗರದಲ್ಲಿ ಗೋಬಿ ಮಂಚೂರಿ ಮಾರಾಟ ಮಾಡುವಂತಿಲ್ಲ

ನವದೆಹಲಿ: ಗೋಬಿ ಮಂಚೂರಿ ಎಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ ? ಮಕ್ಕಳಿಂದ ಹಿಡಿದು ವಯಸ್ಸಾದವರೂ ಬಾಯಿ ಚಪ್ಪರಿಸಿಕೊಂಡು ಸವಿಯುವ ತಿನಿಸು ಇದು. ಆದರೆ ಗೋವಾದ ಮಾಪುಸಾ ನಗರದಲ್ಲಿ ಹೂಕೋಸುವಿನಿಂದ ಮಾಡುವ ಈ ಖಾದ್ಯವನ್ನು ನಿಷೇಧಿಸಲಾಗಿದೆ.

ಕೃತಕ ಬಣ್ಣಗಳ ಬಳಕೆ ಮತ್ತು ನೈರ್ಮಲ್ಯದ ಬಗೆಗಿನ ಕಾಳಜಿಯಿಂದಾಗಿ ಈ ಖಾದ್ಯವನ್ನು ಸ್ಟಾಲ್‌ಗಳು ಮತ್ತು ಹಬ್ಬಗಳಲ್ಲಿ ಮಾರಾಟ ಮಾಡುವುದನ್ನು ನಿರ್ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಅಚ್ಚರಿ ಎಂದರೆ ಮಾಪುಸಾ ಮುನ್ಸಿಪಲ್ ಕೌನ್ಸಿಲ್ ಗೋಬಿ ಮಂಚೂರಿಯನ್ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾದ ಮೊದಲ ನಾಗರಿಕ ಸಂಸ್ಥೆ ಅಲ್ಲ. ಹಿಂದೆಯೂ ಈ ಫಾಸ್ಟ್‌ ಫುಡ್‌ ವಿರುದ್ಧ ಗೋವಾದಲ್ಲಿ ಕಾನೂನು ಸಮರ ಕೈಗೊಳ್ಳಲಾಗಿತ್ತು. 2022ರಲ್ಲಿ ಗೋವಾದ ಶ್ರೀ ದಾಮೋದರ್ ದೇವಸ್ಥಾನದಲ್ಲಿ ನಡೆದ ವಾಸ್ಕೋ ಸಪ್ತಾಹ ಮೇಳದ ಸಮಯದಲ್ಲಿ ಗೋಬಿ ಮಂಚೂರಿ ಮಾರಾಟ ಮಾಡುವ ಮಳಿಗೆಗಳನ್ನು ನಿರ್ಬಂಧಿಸಲು ಮೊರ್ಮುಗಾವೊ ಮುನ್ಸಿಪಲ್ ಕೌನ್ಸಿಲ್‌ಗೆ ಆಹಾರ ಮತ್ತು ಔಷಧ ಆಡಳಿತ ಸೂಚನೆ ನೀಡಿತ್ತು. ಇದಕ್ಕೂ ಮೊದಲು, ಎಫ್‌ಡಿಎ ಗೋಬಿ ಮಂಚೂರಿ ಸ್ಟಾಲ್‌ಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ಕೈಗೊಂಡಿತ್ತು.

ಬೀದಿ ಬದಿಗಳಲ್ಲಿ ಗೋಬಿ ಮಂಚೂರಿ ಮಾರುವವರು ಉತ್ತಮ ಗುಣಮಟ್ಟದ ಸಾಸ್‌ ಬಳಸುವುದಿಲ್ಲ. ಕಡಿಮೆ ಬೆಲೆಯ ರಾಸಾಯನಿಕಯುಕ್ತ ಉತ್ಪನ್ನಗಳನ್ನು ಬಳಸುತ್ತಿದ್ದು, ಅವು ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತವೆ. ಹೂಕೋಸು ಗರಿಗರಿಯಾಗಲು ಮತ್ತು ಖಾದ್ಯದ ರುಚಿ ಹೆಚ್ಚಲು ರಾಸಾಯನಿಕ ಪೌಡರ್‌ಗಳನ್ನೂ ಬಳಸುತ್ತಾರೆ. ಈ ಎಲ್ಲ ಕಾರಣಗಳಿಂದ ಗೋಬಿ ಮಂಚೂರಿಯನ್ನು ನಿಷೇಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Font Awesome Icons

Leave a Reply

Your email address will not be published. Required fields are marked *