ಗುಂಡ್ಲುಪೇಟೆ: ತಾಲೂಕಿನ ಹೊನ್ನಶೆಟ್ಟರ ಹುಂಡಿ ಗ್ರಾಮದ ಡೇರಿ ಚುನಾವಣೆಯಲ್ಲಿ ದಲಿತ ಸಮುದಾಯಕ್ಕೆ ಅನ್ಯಾಯವೆಸಗಲಾಗಿದ್ದು ಪ್ರಸ್ತುತ ಆಯ್ಕೆ ಮಾಡಿರುವ ಹತ್ತು ಮಂದಿ ಸದಸ್ಯರ ಸದಸ್ಯತ್ವವನ್ನ ರದ್ದುಗೊಳಿಸಬೇಕು ಎಂದು ಸ್ಥಳೀಯರು ಚುನಾವಣಾಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.
ಹೊನ್ನಶೆಟ್ಟರಹುಂಡಿ ಡೇರಿ ಚುನಾವಣೆಗೂ ಮುನ್ನವೇ ಯಾವುದೇ ಪತ್ರಿಕಾ ಪ್ರಕಟಣೆ ಮತ್ತು ಮಾಹಿತಿ ನೀಡದೆ ಚುನಾವಣೆಯನ್ನ ನಡೆಸಿ ಅವಿರೋಧವಾಗಿ 10 ಮಂದಿಯನ್ನ ಸದಸ್ಯರನ್ನಾಗಿ ಆಯ್ಕೆ ಮಾಡಿದ್ದು ಸಹಕಾರ ಸಂಘದ ಅಧಿನಿಯಮವನ್ನ ಉಲ್ಲಂಘನೆ ಮಾಡಲಾಗಿದೆ. ಚುನಾವಣಾಧಿಕಾರಿ ಪದ್ಮನಾಭ ಅವರು 13 ಮಂದಿ ಸದಸ್ಯತ್ವ ಇರುವ ಡೇರಿಗೆ 10 ಮಂದಿಯನ್ನ ಆಯ್ಕೆ ಮಾಡಿ ಪ್ರಕಟಣೆ ಹೊರಡಿಸಿರೋದು ಖಂಡನೀಯ.
ಡೇರಿ ಚುನಾವಣೆಗೆ ದಲಿತ ಸಮುದಾಯಕ್ಕೆ ಅನ್ಯಾಯವೆಸಗಿ ಅಪಚಾರವೆಸಗಿದ್ದಾರೆ, ಈ ಕೂಡಲೇ ಆಯ್ಕೆಯಾಗಿರುವ ಅಷ್ಟು ಮಂದಿಯ ಸದಸ್ಯತ್ವವನ್ನ ರದ್ದುಗೊಳಿಸಬೇಕು ಇಲ್ಲವಾದಲ್ಲಿ ಹೋರಾಟ ಮಾಡಲು ಹಿಂಜರಿಯುವುದಿಲ್ಲ ಎಂದು ಸ್ಥಳೀಯ ಮಾಜಿ ಗ್ರಾಮಪಂಚಾಯತಿ ಸದಸ್ಯ ಲೋಕೇಶ್ ಎಚ್ಚರಿಸಿದ್ದು ಮರು ಚುನಾವಣೆ ನಡೆಸುವಂತೆ ಆಗ್ರಹಿಸಿದ್ದಾರೆ.