ಬೀದರ್: ಕರ್ಕಶ ಶಬ್ದ ಮಾಡಿಕೊಂಡು ಬೈಕ್ ಚಾಲನೆ ಮಾಡುವ ಸವಾರರಿಗೆ ಬೀದರ್ ಪೊಲೀಸರು ಬುದ್ದಿ ಕಲಿಸಿದ್ದಾರೆ. 108 ಬೈಕ್ಗಳ ಸೈಲೆನ್ಸರ್ಗಳ ಮೇಲೆ ರೋಲರ್ ಹತ್ತಿಸಿ ನಾಶಪಡಿಸಿದ್ದಾರೆ. ಸುಮಾರು ಐದು ಲಕ್ಷಕ್ಕೂ ಹೆಚ್ಚು ಮೌಲ್ಯದ ಸೈಲೆನ್ಸರ್ ನಾಶ ಪಡಿಸಲಾಗಿದೆ.
ನಗರದ ಪೊಲೀಸ್ ಚೌಕ್ ಬಳಿ ಸಾರ್ವಜನಿಕರ ಮುಂದೆಯೇ ರೋಲರ್ ಹತ್ತಿಸಿ ಸೈಲೆನ್ಸರ್ ಗಳ ನಾಶ ಮಾಡಲಾಗಿದೆ. ಎಸ್ಪಿ ಚೆನ್ನಬಸವಣ್ಣ ಎಸ್.ಎಲ್. ಅವರ ಸಮ್ಮುಖದಲ್ಲಿ ಪೊಲೀಸ್ ಚೌಕ್ ಬಳಿ ಬೈಕ್ ನ ಸೈಲೆನ್ಸರ್ಗಳನ್ನು ಜೋಡಿಸಿ ರೋಲರ್ ಹತ್ತಿಸಿ ನಾಶ ಮಾಡಲಾಗಿದೆ. ಬೀದರ್ ಪೊಲೀಸರು ಈ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದ್ದಾರೆ.
ಕರ್ಕಶ ಶಬ್ದ ಉಂಟುಮಾಡುವ ಸೈಲೆನ್ಸರ್ಗಳನ್ನು ಬೈಕ್ಗೆ ಅಳವಡಿಸಿಕೊಂಡು ಸಂಚಾರ ಮಾಡುವುದರಿಂದ ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗುತ್ತಿದೆ. ಇದನ್ನು ಗಂಭೀರವಾಗಿ ಪರಿಗಣಿಸಿದ ಬೀದರ್ ಪೊಲೀಸರು 108 ಬೈಕ್ಗಳ ಸುಮಾರು 5 ಲಕ್ಷಕ್ಕೂ ಹೆಚ್ಚು ಮೌಲ್ಯದ ಸೈಲೆನ್ಸರ್ಗಳನ್ನು ವಶಕ್ಕೆ ಪಡೆದು ಇವುಗಳನ್ನು ರೋಲರ್ ಹರಿಸಿ ನಾಶಪಡಿಸಿದ್ದಾರೆ.