ಬ್ರಿಟನ್: ಬ್ರಿಟನ್ ಕಿಂಗ್ ಚಾರ್ಲ್ಸ್ ಕ್ಯಾನ್ಸರ್ ಗೆ ತುತ್ತಾಗಿದ್ದು, ಚಿಕಿತ್ಸೆ ಆರಂಭಿಸಿದ್ದಾರೆ ಎಂದು ಬಕಿಂಗ್ಹ್ಯಾಮ್ ಅರಮನೆ ಸೋಮವಾರ(ಫೆ.05) ಪ್ರಕಟಿಸಿದೆ. 73 ವರ್ಷದ ಕಿಂಗ್ ಚಾರ್ಲ್ಸ್ ಅವರಿಗೆ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ ಎಂದು ಬಕಿಂಗ್ಹ್ಯಾಮ್ ಅರಮನೆ ದೃಢಪಡಿಸಿದೆ.
ಕಿಂಗ್ಗೆ ಬಂದಿರುವುದು ಪ್ರಾಸ್ಟೇಟ್ ಕ್ಯಾನ್ಸರ್ ಅಲ್ಲ, ಬದಲಿಗೆ ವಿಸ್ತೃತ ಪ್ರಾಸ್ಟೇಟ್ ಎಂದೂ ತಿಳಿಸಲಾಗಿದೆ. ಕ್ಯಾನ್ಸರ್ನ ನಿಖರ ಸ್ವರೂಪವನ್ನು ಬಹಿರಂಗಪಡಿಸಲಾಗಿಲ್ಲ, ಆದರೆ ಕಿಂಗ್ ಚಾರ್ಲ್ಸ್ ನಿಯಮಿತ ಚಿಕಿತ್ಸೆಗಳನ್ನು ಪ್ರಾರಂಭಿಸಿದ್ದಾರೆ ಎಂದು ತಿಳಿದು ಬಂದಿದೆ.
“ಮಹಾರಾಜರು ಇಂದು ನಿಯಮಿತ ಚಿಕಿತ್ಸೆಗಳ ವೇಳಾಪಟ್ಟಿಯನ್ನು ಪ್ರಾರಂಭಿಸಿದ್ದಾರೆ, ಈ ಸಮಯದಲ್ಲಿ ಸಾರ್ವಜನಿಕ ಕರ್ತವ್ಯಗಳನ್ನು ಮುಂದೂಡುವಂತೆ ವೈದ್ಯರು ಸಲಹೆ ನೀಡಿದ್ದಾರೆ” ಎಂದು ಅರಮನೆ ತಿಳಿಸಿದೆ. ಈ ಅವಧಿಯುದ್ದಕ್ಕೂ, ಮಹಾರಾಜರು ಎಂದಿನಂತೆ ರಾಜ್ಯ ವ್ಯವಹಾರ ಮತ್ತು ಅಧಿಕೃತ ಕಾಗದಪತ್ರಗಳನ್ನು ಕೈಗೊಳ್ಳುವುದನ್ನು ಮುಂದುವರಿಸುತ್ತಾರೆ ಎಂದು ಹೇಳಿದೆ.
A statement from Buckingham Palace: https://t.co/zmYuaWBKw6
📷 Samir Hussein pic.twitter.com/xypBLHHQJb
— The Royal Family (@RoyalFamily) February 5, 2024