ಹೈದರಾಬಾದ್: ತಂದೆ ಜೊತೆ ಗುಡಿಸಲಿನಲ್ಲಿ ಮಲಗಿದ್ದ ಒಂದು ವರ್ಷ ಮಗು ಮೇಲೆ ಬೀದಿ ನಾಯಿಗಳು ದಾಳಿ ಮಾಡಿ ತಿಂದಿರುವ ಘಟನೆ ತೆಲಂಗಾಣದ ಶಂಶಾಬಾದ್ನಲ್ಲಿ ನಡೆದಿದೆ. ಕೆ. ನಾಗರಾಜು (1) ಮೃತಪಟ್ಟ ಮಗು. ಮಗುವಿನ ತಂದೆ ಸೂರ್ಯಕುಮಾರ್ ಕೂಲಿ ಕಾರ್ಮಿಕ.
ಶಂಶಾಬಾದ್ನ ರಾಜೀವ್ ಗೃಹಕಲ್ಪ ಸಂಕೀರ್ಣದ ಬಳಿ ಗುಡಿಸಲಿನಲ್ಲಿ ಸೂರ್ಯಕುಮಾರ್ ತನ್ನ ಮಗುವಿನ ಜೊತೆ ಮಲಗಿದ್ದ. ಈ ವೇಳೆ ಬೀದಿ ನಾಯಿಗಳ ಗುಂಪು ಗುಡಿಸಲಿಗೆ ನುಗ್ಗಿ ದಾಳಿ ನಡೆಸಿವೆ. ಪರಿಣಾಮ ಕಂದಮ್ಮನನ್ನು ಸಿಗಿದು ತಿಂದಿವೆ. ಏಕಾಏಕಿ ನಾಯಿಗಳ ಗುಂಪು ನಡೆಸಿದ ಪರಿಣಾಮ ಮಗುವಿನ ತಂದೆಗೂ ದಿಕ್ಕೇತೋಚದಂತಾಗಿದೆ.
ಈವರೆಗೂ ಮಕ್ಕಳ ಮೇಲೆ ನಡೆದ ದಾಳಿಯಲ್ಲಿ ಇದು ಒಂಬತ್ತನೇ ಗಂಭೀರ ಪ್ರಕರಣವಾಗಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.