ಇಂದು ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ಜನಸ್ಪಂದನ ಕಾರ್ಯಕ್ರಮ

ಬೆಂಗಳೂರು: ಮೊದಲ ಬಾರಿಗೆ ವಿಧಾನಸೌಧದ ಆವರಣದಲ್ಲಿ ಸಿಎಂ ಸಿದ್ದರಾಮಯ್ಯ  ಜನಸ್ಪಂದನ  ಕಾರ್ಯಕ್ರಮ ನಡೆಸಲಿದ್ದಾರೆ. ಇಂದು ಇಡೀ ದಿನ ಜನಸ್ಪಂದನ ಕಾರ್ಯದಲ್ಲಿ ಸಿಎಂ ತೊಡಗಿಸಿಕೊಳ್ಳಲಿದ್ದಾರೆ.

ಇಂದು ಬೆಳಗ್ಗೆ 10 ರಿಂದ ಸಂಜೆ 6 ಗಂಟೆ ತನಕ ಜನಸ್ಪಂದನ ನಡೆಯಲಿದೆ‌. ಜನಸ್ಪಂದನ ಕಾರ್ಯಕ್ರಮಕ್ಕೆ ವಿಧಾನಸೌಧದಲ್ಲಿ ಸಕಲ ಸಿದ್ದತೆಗಳನ್ನ ಮಾಡಿಕೊಳ್ಳಲಾಗಿದೆ. ಬೃಹತ್ ಜರ್ಮನ್ ಟಂಟ್ ಹಾಕಲಾಗಿದೆ. 10 ಸಾವಿರಕ್ಕೂ ಹೆಚ್ಚು ಆಸನದ ವ್ಯವಸ್ಥೆ ಮಾಡಲಾಗಿದೆ. 20 ಬೃಹತ್ ಎಲ್ ಇಡಿ ಸ್ಕ್ರೀನ್ ಅಳವಡಿಸಿದ್ದಾರೆ.

ಜನಸ್ಪಂದನ ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕರಿಗೆ ಲಘು ಉಪಾಹಾರ ಮತ್ತು ನೀರನ ವ್ಯವಸ್ಥೆ ಕಲ್ಪಿಸಲಾಗುತ್ತೆ‌. ಜನಸ್ಪಂದನಕ್ಕೆ ಆಗಮಿಸುವ ಸಾರ್ವಜನಿಕರಿಗೆ ತಾವು ಇರುವಲ್ಲೇ ಲಘು ಉಪಾಹಾರದ ವ್ಯವಸ್ಥೆ ಮಾಡಲಾಗುತ್ತದೆ.

ಸಾರ್ವಜನಿಕರು ತಮ್ಮ ಗುರುತಿನ ಚೀಟಿಯೊಂದಿಗೆ ಅಂದರೆ ಆಧಾರ್ ಅಥವಾ ಪಡಿತರ ಕಾರ್ಡ್ ನೊಂದಿಗೆ ಬಂದು ರಿಜಿಸ್ಟರ್ ಮಾಡಿಕೊಳ್ಳಬೇಕು. ರಿಜಿಸ್ಟರ್ ಮಾಡಿಕೊಳ್ಳುವಾಗ ಯಾವ ಇಲಾಖೆಗೆ ಸಂಬಂಧಿಸಿದ ಸಮಸ್ಯೆ ಎಂದು ನೋಡಿ ಆ ಇಲಾಖೆಯ ಕೌಂಟರ್ ನಂಬರ್ ಕೊಡಲಾಗುತ್ತೆ.

ಆ ಕೌಂಟರ್ ನಂಬರ್ ಬಳಿ ಹೋಗಿ ತಮ್ಮ ಮನವಿಯನ್ನ ಸಾರ್ವಜನಿಕರು ಕೊಡಬಹುದು‌. ಇದಕ್ಕಾಗಿ 36 ವಿವಿಧ ಇಲಾಖೆಯ ಕೌಂಟರ್ ಗಳನ್ನ ತೆರೆಯಲಾಗಿದೆ. ಕೌಂಟರ್ ಗಳಲ್ಲಿ ಇಲಾಖೆಯ ಹಿರಿಯ ಅಧಿಕಾರಿಗಳೇ ಖುದ್ದು ಸಾರ್ವಜನಿಕ ಮನವಿ ಸ್ವೀಕರಿಸಲಿದ್ದಾರೆ.

ಬಳಿಕ ಸಿಎಂ‌ ಸಿದ್ದರಾಮಯ್ಯನವರೇ ಖುದ್ದು ಆ ಕೌಂಟರ್ ಗಳಿಗೆ ತೆರಳಿ ಅರ್ಜಿಯನ್ನ ನೋಡಲಿದ್ದಾರೆ. ಇದಕ್ಕಾಗಿ ಈಗಾಗಲೇ ಎಲ್ಲಾ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಸ್ಥಳದಲ್ಲೇ ಇರುಲು ಸೂಚಿಸಲಾಗಿದೆ.

ಇನ್ನೂ ಆನ್ ಲೈನ್ ನಲ್ಲೂ ನೊಂದಣಿ ಮಾಡಿಕೊಳ್ಳಬಹುದು. ಸಿಎಂ ಜನಸ್ಪಂದನಕ್ಕೆ ಅಹವಾಲು ಸಲ್ಲಿಸಲು 1902 ಸಂಖ್ಯೆ ಗೆ ಕರೆ ಮಾಡಿ ನೊಂದಾಯಿಸಬಹುದು.

ಜನಸ್ಪಂದನಕ್ಕೆ ಬರುವ ಸಾರ್ವಜನಿಕರಿಗೆ ಮೆಜೆಸ್ಟಿಕ್ ನಿಂದ ಹಾಗೂ ಸಂಗೊಳ್ಳಿ ರಾಯಣ್ಣ ರೈಲ್ವೇ ನಿಲ್ದಾಣದಿಂದ ವಿಧಾನಸೌಧಕ್ಕೆ ಉಚಿತ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಹಿರಿಯ ನಾಗರೀಕರು ಹಾಗೂ ವಿಕಲ ಚೇತರಿಗೆ ಪ್ರತ್ಯೇಕ ಆಸನದ ವ್ಯವಸ್ಥೆ ಕಲ್ಪಿಸಲಾಗಿದೆ.

Font Awesome Icons

Leave a Reply

Your email address will not be published. Required fields are marked *