ಪ್ರಧಾನಿ ಮೋದಿ ಒಬಿಸಿ ಅಲ್ಲ ಎಂದು ಟೀಕೆಗೆ ಗುರಿಯಾದ ರಾಹುಲ್‌ ಗಾಂಧಿ

ಜಾರ್ಸುಗುಡ: ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತೆ ಒಬಿಸಿ ಜಾತಿ ವಿಚಾರವನ್ನು ಕೆದಕಿದ್ದಾರೆ. ಸರ್ಕಾರದಲ್ಲಿ ಒಬಿಸಿ ಅಧಿಕಾರಿಗಳ ಕುರಿತು ಪ್ರಶ್ನಿಸಿ ಕೋಲಾಹಲ ಸೃಷ್ಟಿಸಿದ್ದ ರಾಹುಲ್ ಗಾಂಧಿ, ಇದೀಗ ಪ್ರಧಾನಿ ಮೋದಿ ಜಾತಿ ಕೆದಕಿ ಟ್ರೋಲ್ ಆಗಿದ್ದಾರೆ. ಪ್ರಧಾನಿ ಮೋದಿ ಒಬಿಸಿ(ಹಿಂದುಳಿದ ವರ್ಗ) ಜಾತಿಯಲ್ಲಿ ಹುಟ್ಟಿಲ್ಲ. ಮೋದಿ ತಮ್ಮ ಜಾತಿ ಬಗ್ಗೆ ಸುಳ್ಳು ಹೇಳಿದ್ದಾರೆ. ಪ್ರಧಾನಿ ಮೋದಿ ಸಾಮಾನ್ಯ ಕೆಟಗರಿ ಜಾತಿಯಲ್ಲಿ ಹುಟ್ಟಿದ್ದಾರೆ ಎಂದು ರಾಹುಲ್ ಗಾಂಧಿ ಹೊಸ ವಾಗ್ದಾಳಿ ನಡೆಸಿದ್ದಾರೆ. ರಾಹುಲ್ ಗಾಂಧಿ ಆರೋಪಗಳಿಗೆ ಅಷ್ಟೇ ತೀಕ್ಷ್ಣ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪಾರ್ಸಿ ತಂದೆ ಹಾಗೂ ಕ್ಯಾಥೋಲಿಕ್ ತಾಯಿ ಪೋಷಕರಿಂದ ರಾಹುಲ್ ಗಾಂಧಿ ದತ್ತಾತ್ರೆಯ ಕೌಲ್ ಬ್ರಾಹ್ಮಣ ಹೇಗಾಯ್ತು ಎಂದು ಹಲವರು ಪ್ರಶ್ನಿಸಿದ್ದಾರೆ.

ರಾಹುಲ್ ಗಾಂಧಿ ಭಾರತ್ ಜೋಡೋ ನ್ಯಾಯ ಯಾತ್ರೆ ಒಡಿಶಾದ ಜಾರ್ಸುಗುಡ ತಲುಪಿದೆ. ಈ ವೇಳೆ ಅಪಾರ ಬೆಂಬಲಿಗರು, ಕಾಂಗ್ರೆಸ್ ಕಾರ್ಯಕರ್ತರನ್ನುದ್ದೇಶಿ ಮಾತನಾಡಿದ ರಾಹುಲ್ ಗಾಂಧಿ, ಪ್ರಧಾನಿ ಮೋದಿ ಹಸಿ ಹಸಿ ಸುಳ್ಳು ಹೇಳಿ ಜಾತಿ ಮರೆ ಮಾಚಿದ್ದಾರೆ ಎಂದಿದ್ದಾರೆ. ಮೋದಿ ಗುಜರಾತ್‌ನಲ್ಲಿರುವ ತೆಲಿ ಜಾತಿಯಲ್ಲಿ ಹುಟ್ಟಿದ್ದಾರೆ. ಅವರು ಒಬಿಸಿ ಜಾತಿಯಲ್ಲಿ ಹುಟ್ಟಿಲ್ಲ. 2000ನೇ ಇಸವಿಯಲ್ಲಿ ಗುಜರಾತ್‌ನ ಬಿಜೆಪಿ ಸರ್ಕಾರ ತೆಲಿ ಸಮುದಾಯಕ್ಕೆ ಒಬಿಸಿ ಜಾತಿ ಪ್ರಮಾಣ ಪತ್ರ ನೀಡಿತು. ಹೀಗಾಗಿ ಖುದ್ದು ಮೋದಿಯೇ ತಮಗೆ ಒಬಿಸಿ ಜಾತಿ ಪ್ರಮಾಣ ಪತ್ರ ನೀಡಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಪ್ರಧಾನಿ ಮೋದಿ ಯಾವತ್ತೂ ಜಾತಿಗಣತಿಯನ್ನು ಒಪ್ಪಿಕೊಳ್ಳುವುದಿಲ್ಲ. ಕಾರಣ ಮೋದಿ ಹಿಂದುಳಿದ ವರ್ಗದಲ್ಲಿ ಹುಟ್ಟಿಲ್ಲ. ಇದೇ ಕಾರಣದಿಂದ ಮೋದಿ ಜಾತಿಗಣತಿಯನ್ನು ವಿರೋಧಿಸುತ್ತಲೇ ಬಂದಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ರಾಹುಲ್ ಗಾಂಧಿ ಜಾತಿ ವಿಚಾರ ಮತ್ತೆ ಕೆದಕಿ ಆಂದೋಲನ ಸೃಷ್ಟಿಸಲು ಯತ್ನಿಸಿರುವುದು ಟೀಕೆಗೆ ಗುರಿಯಾಗಿದೆ.

Font Awesome Icons

Leave a Reply

Your email address will not be published. Required fields are marked *