ಸರಕಾರದ ನಿರ್ಲಕ್ಷ್ಯದಿಂದ ವಿಶ್ವವಿದ್ಯಾನಿಲಯಗಳು ಮುಚ್ಚಲಿವೆ..! – Just Kannada | Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್

 

ಮೈಸೂರು. ಫೆ. ೦೮, ೨೦೨೪  :  (www justkannada in news) ಸದ್ಯದಲ್ಲೇ ರಾಜ್ಯದ ಬಜೆಟ್ ಮಂಡನೆಯಾಗಲಿದೆ. ಈ ಹಿನ್ನೆಲೆಯಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸರಕಾರ ಆಧ್ಯತೆ ನೀಡಬೇಕಾಗಿರುವ ಕೆಲ ಅಂಶಗಳ ಮೇಲೆ ಬೆಳಕು ಚೆಲ್ಲುವ ನಿಟ್ಟಿನಲ್ಲಿ ವಿಶ್ರಾಂತ ಕುಲಪತಿ ಪ್ರೊ. ಕೆ.ಎಸ್.‌ ರಂಗಪ್ಪ ́ ಜಸ್ಟ್‌ ಕನ್ನಡ ́ ಜತೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಇತ್ತೀಚಿಗೆ ಸರ್ಕಾರಗಳು ಉನ್ನತ ಶಿಕ್ಷಣವನ್ನ ನಿರ್ಲಕ್ಷ್ಯಸುತ್ತಿವೆ.  ರಾಜ್ಯದಲ್ಲಿರು 49 ವಿಶ್ವ ವಿದ್ಯಾನಿಲಯಗಳ ಸ್ಥಿತಿ ಶೋಚನೀಯ. ಸೂಕ್ತವಾದ ಇನ್ಫ್ರಾಸ್ಟ್ರಕ್ಚರ್, ಫ್ಯಾಕಲ್ಟಿ ಇಲ್ಲದೆ ರೋಗಗ್ರಸ್ತವಾಗಿವೆ.

ಇದರ ಬಗ್ಗೆ ರಾಜ್ಯ ಸರ್ಕಾರವಾಗಲಿ ಕೇಂದ್ರ ಸರ್ಕಾರವಾಗಲಿ ಗಮನ ವಹಿಸುತ್ತಿಲ್ಲ. ಮುಂದೊಂದು ದಿನ ವಿ.ವಿಗಳು ಮುಚ್ಚುವ ಹಂತಕ್ಕೂ ತಲುಪಬಹುದು.

ಮೈಸೂರು ವಿ.ವಿಯಲ್ಲಿ  ಶೇ 20 ರಿಂದ 25 ಮಾತ್ರ ಫ್ಯಾಕಲ್ಟಿ ಇದೆ. ಶೇ 75 ರಷ್ಟು ಫಾಕಲ್ಟಿ ಖಾಲಿ ಇವೆ. ಸರ್ಕಾರದ ಯಾವುದೇ  ಗ್ರ್ಯಾಂಟ್ ಇಲ್ಲ, ಪ್ರೋತ್ಸಾಹ ಇಲ್ಲ  ವಿಶ್ವವಿದ್ಯಾಲಯಗಳ ಸ್ಥಿತಿ ಹೇಳತೀರದು.

2015 ರ ತನಕ ಚೆನ್ನಾಗಿತ್ತು ಬಳಿಕ ವಿ.ವಿಗಳ ಸ್ಥಿತಿ ಕ್ಷೀಣಿಸುತ್ತಿದೆ. ಮೈಸೂರು ವಿ.ವಿ ಜಾಗತಿಕ ಮಟ್ಟದಲ್ಲಿ ಪ್ರಸಿದ್ದಿಯಾಗಿತ್ತು.  ಈಗ ಎಲ್ಲೋ ಒಂದು ಕಡೆ ಸರ್ಕಾರಗಳ ನಿರ್ಲಕ್ಷ್ಯದಿಂದ ಹೀನಾಯ ಪರಿಸ್ಥಿತಿ ತಲುಪಿವೆ.

ಉನ್ನತ ಶಿಕ್ಷಣ ನಿರ್ಲಕ್ಷ್ಯ ಮಾಡಿದ ಯಾವುದೇ ದೇಶ ಎಲ್ಲೂ  ಮುಂದೆ ಬಂದಿಲ್ಲ.  ಈ ರೀತಿ ಆಗಬಾರದು ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರ ಎರಡಕ್ಕೂ ನಾನು ಮನವಿ ಮಾಡುತ್ತೇನೆ.

ಮುಂದಿನ ಬಜೆಟ್ ನಲ್ಲಿ ವಿ.ವಿಗಳ ಕಡೆಗೂ ಒಂದಷ್ಟು ಗಮನ ಹರಿಸಬೇಕು. ಮುಂದಿನ ಪೀಳಿಗೆಗೆ ವಿ.ವಿ ಗಳ ಉಳಿಯಬೇಕಾದರೆ ಸರ್ಕಾರಗಳು ಗಂಭೀರವಾಗಿ ಪರಿಗಣಿಸಬೇಕು.

ಪ್ರಸ್ತುತ ವಿ.ವಿಗಳ ವಿದ್ಯಮಾನ ಕುರಿತು ವಿಶ್ರಾಂತ ಕುಲಪತಿ ಪ್ರೊ.ಕೆ ಎಸ್ ರಂಗಪ್ಪ ಕಳವಳ.

Key words : Karnataka ̲ mysore ̲ education  ̲ budget ̲ requirement ̲ university̲ rangappa̤ k̤ s

Font Awesome Icons

Leave a Reply

Your email address will not be published. Required fields are marked *