ಕನ್ನಡ ತಂತ್ರಾಂಶಗಳು ಅಭಿವೃದ್ಧಿಯಾಗಬೇಕು: ಡಾ.ಕೆ.ಚಿದಾನಂದ ಗೌಡ

ಮೈಸೂರು: ಈಗ ಎಲ್ಲ ಕ್ಷೇತ್ರಗಳಲ್ಲೂ ಕಂಪ್ಯೂಟರ್ ಬಳಕೆ ಹೆಚ್ಚಾಗುತ್ತಿರುವುದರಿಂದ ಕನ್ನಡ ತಂತ್ರಾಂಶಗಳು ಹೆಚ್ಚೆಚ್ಚು ಅಭಿವೃದ್ಧಿಯಾಗಬೇಕು. ಕನ್ನಡವನ್ನು ಆಡಳಿತ ಭಾಷೆಯನ್ನಾಗಿ ಸಮರ್ಪಕವಾಗಿ ಅನುಷ್ಠಾನಕ್ಕೆ ತರಬೇಕು ಎಂದು ಸಮ್ಮೇಳನಾಧಕ್ಷರಾದ ಡಾ.ಕೆ.ಚಿದಾನಂದ ಗೌಡ ಕರೆ ನೀಡಿದ್ದಾರೆ.

ನಗರದ ಕಲಾಮಂದಿರದಲ್ಲಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಂಡಿದ್ದ ಚಾಮರಾಜ ವಿಧಾನಸಭಾ ಕ್ಷೇತ್ರದ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ಆಡಳಿತ ಭಾಷೆಯಾಗದಿದ್ದರೆ ಅದು ಸಂಸ್ಕೃತದಂತೆ ಮೃತ ಭಾಷೆ ಆಗುತ್ತದೆ ಎಂದು ಹಿಂದೆ ಹಿರಿಯ ವಿಜ್ಞಾನಿ ಡಾ.ರಾಜಾ ರಾಮಣ್ಣನವರು ಎಚ್ಚರಿಕೆ ನೀಡಿದ್ದರು. ಇಂದು ಎಲ್ಲ ಕ್ಷೇತ್ರಗಳಲ್ಲೂ ಗಣಕಯಂತ್ರ ಬರುತ್ತಿದೆ. ಮಾಹಿತಿ ತಂತ್ರಜ್ಞಾನ ವ್ಯಾಪಕವಾಗಿ ಬೆಳೆಯುತ್ತಿದೆ. ಹಾಗಾಗಿ ಕಂಪ್ಯೂಟರ್‌ನಲ್ಲಿ ಕನ್ನಡ ಬಳಕೆ ಹೆಚ್ಚಾಗಬೇಕು. ಇಲ್ಲದಿದ್ದರೆ ಕನ್ನಡ ವ್ಯವಹಾರದ ಆಡಳಿತ ಭಾಷೆಯ ಸ್ಥಾನದಿಂದ ಕೆಳಗಿಳಿದು ಬರೆ ಆಡು ಭಾಷೆಯಾಗಿ ಮನೆಯ ಮಾತಾಗಿ ಮಾತ್ರ ಉಳಿಯುತ್ತದೆ ಎಂದು ಎಚ್ಚರಿಸಿದರು.

ಜಾಗತೀಕರಣದ ಪರಿಣಾಮ ಜಗತ್ತೇ ಒಂದು ಹಳ್ಳಿಯಾದಂತಾಗಿದೆ. ಹೀಗಾಗಿ ಸ್ಥಳೀಯ ಭಾಷೆಗಳಿಗೆ ಅಪಾಯ ಎದುರಾಗಿದೆ. ಈ ಸವಾಲನ್ನು ನಾವು ದೃಢ ಮನಸ್ಸಿನಿಂದ ಎದುರಿಸಬೇಕಾಗಿದೆ. ಇದಕ್ಕಾಗಿ ನಾವು ಹೋರಾಟ ಮಾಡಬೇಕು. ಆದರೆ, ಆ ಹೋರಾಟ ಬೀದಿಗಳಲ್ಲಿ ಕೂಗುವ, ಭಾಷಣ ಬಿಗಿಯುವ ಹೋರಾಟವಲ್ಲ. ಬದಲಿಗೆ ಕಂಪ್ಯೂಟರ್‌ನಲ್ಲಿ ಹೆಚ್ಚೆಚ್ಚು ಕನ್ನಡ ಬಳಕೆಯ ತಂತ್ರಾಂಶಗಳು ಅಭಿವೃದ್ಧಿಯಾಗಬೇಕು. ಇಂಗ್ಲಿಷ್‌ನಷ್ಟೇ ಸುಲಭವಾಗಿ ಕನ್ನಡ ಭಾಷೆ ಕಂಪ್ಯೂಟರ್‌ನಲ್ಲಿ ಸಿಗುವಂತಿರಬೇಕು ಎಂದು ತಿಳಿಸಿದರು.

ಶಾಸಕ ಕೆ.ಹರೀಶ್‌ಗೌಡ ಮಾತನಾಡಿ, ಕರ್ನಾಟಕ ಸುವರ್ಣ ಸಂಭಮದಲ್ಲಿ ನಾವಿದ್ದೇವೆ. ಡಾ.ರಾಜ್ಕುಮಾರ್, ಕುವೆಂಪು ಸೇರಿದಂತೆ ಸಾಕಷ್ಟು ಮಹನೀಯರು ಕನ್ನಡ ನಾಡಿನುಡಿಗೆ ಅಪಾರ ಕೊಡುಗೆಗಳನ್ನು ನೀಡಿzರೆ. ನನ್ನ ಕ್ಷೇತ್ರದಲ್ಲೂ ಸಾಕಷ್ಟು ಸಾಹಿತಿಗಳು, ಚಳವಳಿಗಾರರು, ಕಲಾವಿದರು ಕನ್ನಡ ನಾಡಿಗೆ ಸೇವೆ ಸಲ್ಲಿಸಿದ್ದಾರೆ. ಮಾತೃಭಾಷೆ ಕನ್ನಡವನ್ನು ಕನ್ನಡ ಉಳಿಸಿ ಬೆಳೆಸುವುದು ನಮ್ಮ ಕರ್ತವ್ಯವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಶಾಸಕ ಕೆ.ಹರೀಶ್ ಗೌಡ, ವಾಗ್ಮಿ ಪ್ರೊ.ಎಂ.ಕೃಷ್ಣೇಗೌಡ, ಸಾಹಿತಿಗಳಾದ ಡಾ.ಸಿ.ಪಿ.ಕೃಷ್ಣಕುಮಾರ್, ಅರವಿಂದ ಮಾಲಗತ್ತಿ, ನಿವೃತ್ತ ಪ್ರಾಧ್ಯಾಪಕ ಪ್ರೊ.ಸಿ.ನಾಗಣ್ಣ, ಜಿ ಕಸಾಪ ಅಧP ಮಡ್ಡಿಕೆರೆ ಗೋಪಾಲ್, ನಿಕಟಪೂರ್ವ ಅಧಕ್ಷ ವೈ.ಡಿ.ರಾಜಣ್ಣ, ಚಂದ್ರಶೇಖರ್, ಹಿರಿಯ ರಂಗಕರ್ಮಿ ರಾಜಶೇಖರ ಕದಂಬ, ಕಸಾಪ ಮೈಸೂರು ನಗರಾಧP ಕೆ.ಎಸ್.ಶಿವರಾಂ, ಪಾಲಿಕೆ ಮಾಜಿ ಸದಸ್ಯ ಕೆ.ವಿ.ಶ್ರೀಧರ, ಪಾಲಿಕೆ ಉಪ ಆಯುಕ್ತ ಜಿಗಣಿ ಸೋಮಶೇಖರ್ ಸೇರಿದಂತೆ ಇತರರು ಭಾಗವಹಿಸಿದ್ದರು.

Font Awesome Icons

Leave a Reply

Your email address will not be published. Required fields are marked *