ಜಗನ್ಮಾತೆ ಅಕ್ಕಮಹಾದೇವಿ ಚಲನಚಿತ್ರ ನಿರ್ಮಾಣಕ್ಕೆ ಚಾಲನೆ

ಭಾಲ್ಕಿ: ತಾಲ್ಲೂಕಿನ ಧನ್ನೂರ (ಎಚ್) ಗ್ರಾಮದಲ್ಲಿ ಬಿ.ಜೆ. ವಿಷ್ಣುಕಾಂತ ರಚಿಸಿ ನಿರ್ಮಿಸುತ್ತಿರುವ ಜಗನ್ಮಾತೆ ಅಕ್ಕಮಹಾದೇವಿ ಚಲನಚಿತ್ರಕ್ಕೆ ಉಪ್ಪಿನ ಬೆಟಗೇರಿಯ ಕುಮಾರ ವೀರೂಪಾಕ್ಷ ಸ್ವಾಮೀಜಿ ಕ್ಲ್ಯಾಪ್ ಮಾಡುವ ಮೂಲಕ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ಬಸವಣ್ಣನವರು ನಡೆದಾಡಿದ ಭೂಮಿಯಲ್ಲಿ ಜಗನ್ಮಾತೆ ಅಕ್ಕಮಹಾದೇವಿ ಚಲನಚಿತ್ರಕ್ಕೆ ಚಾಲನೆ ನೀಡಿರುವುದು ಸಂತಸ ತಂದಿದೆ. ಉತ್ತಮ ಪಾತ್ರಧಾರಿಗಳು, ಮನಮುಟ್ಟುವ ಶರಣರ ಕಥೆಯಿರುವ ಚಲನಚಿತ್ರ ನೋಡುವುದರಿಂದ ಮನ: ಪರಿವರ್ತನೆಯಾಗುತ್ತದೆ ಎಂದು ತಿಳಿಸಿದರು.

ಧನ್ನೂರ ಗ್ರಾಮದವರೇ ಆದ ನಟ, ನಿರ್ದೇಶಕ, ನಿರ್ಮಾಪಕ ಬಿ.ಜೆ.ವಿಷ್ಣುಕಾಂತ ಅವರು ಈ ಹಿಂದೆ ಡಾ. ಬಿ.ಆರ್.ಅಂಬೇಡ್ಕರ್, ಕಲ್ಯಾಣ ಕುವರ, ಸೇರಿದಂತೆ ಹಲವಾರು ಚಲನ ಚಿತ್ರಗಳನ್ನು ನಿರ್ಮಿಸಿ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚನಶೆಟ್ಟಿ, ಶಿವಶಂಕರ ಟೋಕರೆ, ಡಾ. ಓಂಕಾರ ಸ್ವಾಮಿ ಮಾತನಾಡಿದರು.

ಚಲನಚಿತ್ರಕ್ಕೆ ರವಿ ಸುವರ್ಣ ಛಾಯಾಗ್ರಹಣ, ಆರ್.ಪಳನಿ ಸಂಗೀತ ನೀಡಲಿದ್ದಾರೆ. ಪ್ರಮುಖರಾದ ಪರಮೇಶ್ವರ ಪಾಟೀಲ, ಶ್ರೀಕಾಂತ ದಾನಿ, ಬಸವರಾಜ ಹಾಳಿ, ಬಾಬುರಾವ್ ಪೊಲೀಸ್ ಪಾಟೀಲ, ಕಾಶಿನಾಥ ಖಂಡ್ರೆ, ಚಂದ್ರಕಲಾ ಅಶೋಕ, ಗುಂಡೇರಾವ್ ಪಾಟೀಲ, ವೈಜಿನಾಥ ಮೂಲಗೆ, ಗಣೇಶ ಸಿ.ಎ.ಇದ್ದರು.

Font Awesome Icons

Leave a Reply

Your email address will not be published. Required fields are marked *