ವಕೀಲರ ಡೆಸ್ಸ್‌ ಕೋಡ್ ಬಗ್ಗೆ ಮತ್ತೆ ಸ್ಪಷ್ಟಪಡಿಸಿದ ನ್ಯಾಯಾಲಯ

ಗುವಾಹಟಿ: ಜೀನ್ಸ್‌ ಧರಿಸಿ ನ್ಯಾಯಾಲಯಕ್ಕೆ ಬಂದಿದ್ದ ತಮ್ಮ ನಡೆಯನ್ನು ಸಮರ್ಥಿಸಿ ವಕೀಲರೊಬ್ಬರು ಸಲ್ಲಿಸಿದ ಅರ್ಜಿಯನ್ನು ವಜಾಗೊಳಿಸಿದ ಗುವಾಹಟಿ ಹೈಕೋರ್ಟ್‌, ಅವರನ್ನು ತರಾಟೆಗೆ ತೆಗೆದುಕೊಂಡಿದೆ.

ಕಳೆದ ವರ್ಷ ಏಪ್ರಿಲ್‌ ತಿಂಗಳಲ್ಲಿ ಮಹಾಜನ್‌ ಎಂಬ ವಕೀಲರೊಬ್ಬರು ಪ್ರಕರಣವೊಂದರ ವಾದ ಮಂಡಿಸಲು ಜೀನ್ಸ್‌ ಧರಿಸಿ ಬಂದಿದ್ದ ಕಾರಣ ಅವರನ್ನು ಗುವಾಹಟಿ ಕೋರ್ಟ್‌ ʼಡಿಕೋರ್ಟ್‌ʼ ಮಾಡಿತ್ತು. ಈ ಆದೇಶದಲ್ಲಿ ಮಾರ್ಪಾಟು ಮಾಡುವಂತೆ ಕೋರಿ ಮಹಾಜನ್‌ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಜೀನ್ಸ್‌ ಧರಿಸಲು ಅನುಮತಿಸಿದರೆ ಮುಂಬರುವ ದಿನಗಳಲ್ಲಿ ಹರಿದ, ಮಾಸಿದ ಕಪ್ಪು ಪ್ಯಾಂಟ್‌ ಅಥವ ಪೈಜಾಮಾ ಧರಿಸಲು ಅನುಮತಿ ಕೋರಿ ಬೇಡಿಕೆಗಳು ಬರುತ್ತವೆ ಎಂಬ ಕಾರಣ ನೀಡಿ ನ್ಯಾಯಮೂರ್ತಿ ಕಲ್ಯಾಣ್‌ ರೈ ಸುರಾನಾ ಅರ್ಜಿಯನ್ನು ವಜಾಗೊಳಿಸಿದ್ದರು.

ಬಾರ್‌ ಕೌನ್ಸಿಲ್‌ ಆಫ್‌ ಇಂಡಿಯಾ ಮಾರ್ಗಸೂಚಿಯ ಪ್ರಕಾರ ನ್ಯಾಯಾಲಯದಲ್ಲಿ ಜೀನ್ಸ್‌ ಧರಿಸುವುದನ್ನು ನಿರ್ಬಂಧಿಸಲಾಗಿದೆ.

೧೯೬೧ರ ವಕೀಲರ ಕಾಯ್ದೆ ಪ್ರಕಾರ ನ್ಯಾಯಾಲಯಕ್ಕೆ ಹಾಜರಾಗುವಾಗ ವಕೀಲರು ಕುತ್ತಿಗೆಪಟ್ಟಿಯೊಂದಿಗೆ ಬಿಳಿ ಅಂಗಿ, ಮೇಲೆ ಕಪ್ಪು ಕೋಟ್‌ ಧರಿಸಬೇಕು ಎಂದು ಸೂಚಿಸಲಾಗಿದೆ.

ನಿಗದಿತ ವಸ್ತ್ರಸಂಹಿತೆಯ ಉಲ್ಲಂಘನೆಯು ವಕೀಲರ ಕಾಯಿದೆ ೧೯೬೧ರ ಸೆಕ್ಷನ್‌ ೩೫ರ ಅಡಿಯಲ್ಲಿ ಶಿಕ್ಷಾರ್ಹವೆಂದು ಎಲ್ಲಾ ಬಾರ್‌ ಅಸೋಸಿಯೇಷನ್‌ಗಳಿಗೆ ಪತ್ರದ ಮೂಲಕ ಬಾರ್‌ ಕೈನ್ಸಿಲ್‌ ಎಚ್ಚರಿಸಿತ್ತು.

Font Awesome Icons

Leave a Reply

Your email address will not be published. Required fields are marked *