ಕಾರವಾರ: ಗೋಕರ್ಣದಿಂದ ನಾಪತ್ತೆಯಾಗಿದ್ದ ಜಪಾನ್ ದೇಶದ ಪ್ರವಾಸಿ ಮಹಿಳೆ ಎಮಿ ಯಮಾಝಕಿ ಕೇರಳದ ರಾಜಧಾನಿ ತಿರುವನಂತಪುರದಲ್ಲಿ ಶುಕ್ರವಾರ ಪತ್ತೆ ಆಗಿದ್ದಾರೆ.
ವಿಶೇಷ ತಂಡ ರಚಿಸಿದ್ದ ಪಿಎಸ್ಐ ಖಾದರ್ ಬಾಷಾ, ಸುಧಾ ಅಘನಾಶಿನಿ ನೇತೃತ್ವದಲ್ಲಿ ಪತ್ತೆ ಮಾಡಲಾಗಿದೆ.
ಘಟನೆ ಏನು?: ಫೆ.4ರಂದು ಉತ್ತರ ಕನ್ನಡ ಜಿಲ್ಲೆ ಕುಮಟಾ ತಾಲೂಕಿನ ಗೋಕರ್ಣದ ಬಂಗ್ಲೆಗುಡ್ಡದ ನೇಚರ್ ಕಾಟೇಜ್ನಲ್ಲಿ ಪತಿ ಜತೆ ತಂಗಿದ್ದರು. ಆದರೆ ಪತಿ ಮಲಗಿದ್ದ ವೇಳೆ ಅಂದರೆ ಫೆ.5ರ ಬೆಳಗ್ಗೆ 10.15ರ ಸುಮಾರಿಗೆ ಕಾಟೇಜ್ನಿಂದ ಹೊರಬಂದಿದ್ದ ಎಮಿ ಯಮಾಝಕಿ ಬಳಿಕ ನಾಪತ್ತೆಯಾಗಿದ್ದರು.
ಎಮಿ ಪತಿ ದೈ ಯಮಾಝಕಿ ಗೋಕರ್ಣ ಠಾಣೆಗೆ ದೂರು ನೀಡಿದ್ದರು. ನಾಪತ್ತೆಯಾದ ನಂತರ ಆನ್ಲೈನ್ನಲ್ಲಿ ಎಮಿ ಯಮಾಝಕಿ ಸಂಪರ್ಕದಲ್ಲಿದ್ದರು. ಮಹಿಳೆ ಪತಿಗೆ ಕಳುಹಿಸಿದ್ದ ಆನ್ಲೈನ್ ಸಂದೇಶ ಆಧರಿಸಿ ತಂಡದೊಂದಿಗೆ ಕೇರಳಕ್ಕೆ ತೆರಳಿದ್ದ ಗೋಕರ್ಣ ಪೊಲೀಸರು ಮಹಿಳೆಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಗೋಕರ್ಣದ ಕಾಟೇಜ್ನಲ್ಲಿ ತಂಗಿದ್ದಾಗ ದಂಪತಿ ನಡುವೆ ಮನಸ್ತಾಪವಾಗಿತ್ತು. ಪತಿ ಮೇಲಿನ ಕೋಪದಿಂದ ರೈಲು ಹತ್ತಿ ಕೇರಳಕ್ಕೆ ತೆರಳಿದ್ದಾಗಿ ಮಹಿಳೆ ಮಾಹಿತಿ ನೀಡಿದ್ದಾರೆ.