ದೆಹಲಿ: ಎಎಪಿ ರಾಜ್ಯದ ಎಲ್ಲಾ 13 ಮತ್ತು ಚಂಡೀಗಢದ 1 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ ಎಂದು ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಶನಿವಾರ ಘೋಷಿಸಿದ್ದಾರೆ.
ಈ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್‌ನೊಂದಿಗೆ ಯಾವುದೇ ಮೈತ್ರಿ ಇಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಮುಂದಿನ 10-15 ದಿನಗಳಲ್ಲಿ ಪಕ್ಷವು ಈ ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಘೋಷಿಸಲಿದೆ ಎಂದು ಎಎಪಿ ಸಂಚಾಲಕರು ತಿಳಿಸಿದ್ದಾರೆ. ಪಂಜಾಬ್ ಸರ್ಕಾರದ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿಯಲ್ಲಿ ಪಡಿತರವನ್ನು “ಬಾಗಿಲಿಗೆ ತಲುಪಿಸಲು” ಆಯೋಜಿಸಲಾದ ಸಭೆಯಲ್ಲಿ ಕೇಜ್ರಿವಾಲ್ ಅವರು ಈ ಘೋಷಣೆಯನ್ನು ಮಾಡಿದ್ದಾರೆ.
ಎರಡು ವರ್ಷಗಳ ಹಿಂದೆ, ನೀವು ನಿಮ್ಮ ಆಶೀರ್ವಾದವನ್ನು ನೀಡಿದ್ದೀರಿ. 117 ಸೀಟುಗಳಲ್ಲಿ ನಮಗೆ 92 ಸೀಟು ಕೊಟ್ಟಿದ್ದೀರಿ. ನೀವು ಪಂಜಾಬ್‌ನಲ್ಲಿ ಇತಿಹಾಸ ಸೃಷ್ಟಿಸಿದ್ದೀರಿ. ಇಂದು ನಾನು ಮತ್ತೆ ಕೈಮುಗಿದು ನಿಮ್ಮ ಆಶೀರ್ವಾದವನ್ನು ಕೋರುತ್ತೇನೆ. ಎರಡು ತಿಂಗಳ ನಂತರ ಲೋಕಸಭೆ ಚುನಾವಣೆ ಇದೆ. ಪಂಜಾಬ್‌ನಲ್ಲಿ 13 (ಲೋಕಸಭಾ) ಸ್ಥಾನಗಳಿವೆ, ಒಂದು ಚಂಡೀಗಢ ಮತ್ತು 14 ಸ್ಥಾನಗಳಿವೆ ಎಂದು ಕೇಜ್ರಿವಾಲ್ ಹೇಳಿರುವುದಾಗಿ ಪಿಟಿಐ ಉಲ್ಲೇಖ ಮಾಡಿದೆ.