ಸಿಕ್ಕಿಂ: ಸಿಕ್ಕಿಂ ರಾಜಧಾನಿ ಗ್ಯಾಂಗ್ಟಾಕ್ನಿಂದ ಸುಮಾರು 11 ಕಿಮೀ ದೂರದಲ್ಲಿರುವ ರಾನ್ಪುಲ್ನಲ್ಲಿ ಜಾತ್ರಾ ಮೇಳ ನಡೆಯುವಾಗ ಭೀಕರ ಅಪಘಾತ ಸಂಭವಿಸಿದೆ.
ಸಾರ್ವಜನಿಕ ಮೈದಾನದೊಳಗೆ ನಿಯಂತ್ರಣ ತಪ್ಪಿದ ಹಾಲು ಒಕ್ಕೂಟದ ಟ್ಯಾಂಕರ್ ನುಗ್ಗಿ ಮೂವರು ಸಾವನ್ನಪ್ಪಿದ್ದು, ಇನ್ನೂ ಮೂವರ ಸ್ಥಿತಿ ಗಂಭೀರವಾಗಿದ್ದು, 20 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ರಾತ್ರಿ 7.12 ಸುಮಾರಿಗೆ ನಡೆದ ಈ ಘಟನೆಯಲ್ಲಿ ನಿಂತಿದ್ದ ವಾಹನಗಳು, ಅಂಗಡಿಗಳು ಸೇರಿದಂತೆ ಆಸ್ತಿಪಾಸ್ತಿಗೆ ಭಾರೀ ಹಾನಿಯಾಗಿದೆ.
ಅಫಘಾತವಾಗ್ತಿದ್ದಂತೆ ತಕ್ಷಣವೇ ಗಾಯಾಳುಗಳ ರಕ್ಷಣೆಗೆ ಸ್ಥಳದಲ್ಲಿದ್ದವರು ಧಾವಿಸಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಟ್ಯಾಂಕರ್ ಅಪಘಾತದ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಕುರಿತಂತೆ ಪ್ರಕರಣ ದಾಖಲಿಸಿಕೊಂಡಿರೋ ರಾಣಿಪುಲ್ ಪೊಲೀಸರು ತನಿಖೆ ಆರಂಭಿಸಿದ್ದಾರೆ.