ಕಾನ್ಸ್​​​ಟೇಬಲ್ ಮೇಲೆ ಜೆಡಿಎಸ್​​​ ಶಾಸಕಿ ಪುತ್ರನಿಂದ ಹಲ್ಲೆ​

ರಾಯಚೂರು: ದೇವದುರ್ಗ ವಿಧಾನಸಭಾ ಕ್ಷೇತ್ರದ ಜೆಡಿಎಸ್ ​​ ಶಾಸಕಿ ಕರೆಮ್ಮ ನಾಯಕ್  ಅವರ ಪುತ್ರ ಸಂತೋಷ್, ಪಿಎ ಇಲಿಯಾಸ್ ಸೇರಿದಂತೆ ಎಂಟು ಜನರು ದೇವದುರ್ಗ ಪೊಲೀಸ್​ ಠಾಣೆಯ ಕರ್ತವ್ಯನಿರತ ಕಾನ್ಸ್​​​ಟೇಬಲ್​ ಮೇಲೆ ಹಲ್ಲೆ ಮಾಡಿದ್ದಾರೆ.

ಹನುಮಂತರಾಯ ಹಲ್ಲೆಗೊಳಗಾದ ಕರ್ತವ್ಯನಿರತ ಕಾನ್ಸ್​​​ಟೇಬಲ್

ಕಾನ್ಸ್​ಟೇಬಲ್ ಹನುಮಂತರಾಯ ಅವರು ರವಿವಾರ (ಫೆ.11) ರಂದು ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ್​ ಅನ್ನು​ ತಡೆದಿದ್ದರು.

ಟ್ರ್ಯಾಕ್ಟರ್​ ತಡೆಹಿಡಿದ ವಿಚಾರಕ್ಕೆ ಶಾಸಕಿ ಪುತ್ರ ಸಂತೋಷ್​​ ಕಾನ್ಸ್​ಟೇಬಲ್ ಹನುಮಂತರಾಯ ಅವರಿಗೆ ​ಕರೆ ಮಾಡಿ ಟ್ರ್ಯಾಕ್ಟರ್​ ಬಿಡುವಂತೆ ಹೇಳಿದ್ದಾರೆ. ಒತ್ತಡಕ್ಕೆ ಮಣಿಯದ ಕಾನ್ಸ್​ಟೇಬಲ್ ಹನುಮಂತರಾಯ ಅವರು ಟ್ರ್ಯಾಕ್ಟರ್​ ಅನ್ನು ಪೊಲೀಸ್​ ಠಾಣೆಗೆ ತಂದು ಪರಿಶೀಲನೆ ನಡೆಸಿದ್ದಾರೆ.

ಇದರಿಂದ ಆಕ್ರೋಶಗೊಂಡ ಶಾಸಕಿ ಪುತ್ರ ಸಂತೋಷ್​ ಕಾನ್ಸ್​ಟೇಬಲ್ ಹನುಮಂತರಾಯ ಅವರನ್ನು​ ದೇವದುರ್ಗ ಪ್ರವಾಸಿ ಮಂದಿರಕ್ಕೆ ಕರೆಸಿಕೊಂಡು ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ.

ಹಲ್ಲೆ ಮಾಡಿದ ಬಳಿಕ, ರಾಜಕೀಯ ಪ್ರಭಾವ ಬಳಸಿ ಪ್ರಕರಣವನ್ನು ಮುಚ್ಚಿ ಹಾಕಲು ಯತ್ನಿಸಿದ್ದಾರೆ ಎನ್ನಲಾಗುತ್ತಿದೆ.

ಸದ್ಯ ಹಲ್ಲೆಗೊಳಗಾದ ಕಾನ್ಸ್​​​ಟೇಬಲ್​ ಹನುಮಂತರಾಯ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ದೇವದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

 

Font Awesome Icons

Leave a Reply

Your email address will not be published. Required fields are marked *