ಬಿಜೆಪಿ ಸೇರಿದ ಮಹಾರಾಷ್ಟ್ರದ ಮಾಜಿ ಸಿಎಂ ಅಶೋಕ್ ಚವಾಣ್

ಮುಂಬೈ: ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಅಶೋಕ್ ಚವಾಣ್ ಇಂದು(ಮಂಗಳವಾರ)ಬಿಜೆಪಿಗೆ ಸೇರಿದ್ದಾರೆ. ನಿನ್ನೆ ಅವರು ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದರು. ಮುಂಬೈ ಬಿಜೆಪಿ ಕಚೇರಿಯಲ್ಲಿ ಚವಾಣ್ ಪಕ್ಷಕ್ಕೆ ಸೇರಿದ್ದು ಅವರೊಂದಿಗೆ ಮಾಜಿ ಕಾಂಗ್ರೆಸ್ ಎಂಎಲ್​​ಸಿ ಅಮರ್ ರಾಜುರ್ಕರ್ ಕೂಡಾ ಬಿಜೆಪಿ ಸೇರಿದ್ದಾರೆ.

ಇಂದು ಬಿಜೆಪಿ ಸೇರುವ ನಿರ್ಧಾರದ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಮಹಾರಾಷ್ಟ್ರದ ಮಾಜಿ ಸಿಎಂ ಅಶೋಕ್ ಚವಾಣ್, ಇಂದು ಇದು ನನ್ನ ರಾಜಕೀಯ ಜೀವನದ ಹೊಸ ಆರಂಭವಾಗಿದೆ. ನಾನು ಇಂದು ಅವರ ಕಚೇರಿಯಲ್ಲಿ ಔಪಚಾರಿಕವಾಗಿ ಬಿಜೆಪಿಗೆ ಸೇರುತ್ತಿದ್ದೇನೆ. ಮಹಾರಾಷ್ಟ್ರದ ರಚನಾತ್ಮಕ ಅಭಿವೃದ್ಧಿಗಾಗಿ ಕೆಲಸ ಮಾಡುತ್ತೇವೆ ಎಂದರು.

ಅಶೋಕ್ ಚವಾಣ್ ಅವರಿಗೆ ಬಿಜೆಪಿಯಿಂದ ರಾಜ್ಯಸಭಾ ಸ್ಥಾನವನ್ನು ನೀಡಲಾಗುವುದು ಎಂಬ ಬಲವಾದ ಸಲಹೆಗಳಿವೆ. ಇಂದು ಸಂಜೆ ಅಥವಾ ನಾಳೆ ಬೆಳಿಗ್ಗೆ ಬಿಜೆಪಿ ತನ್ನ ರಾಜ್ಯಸಭಾ ಸದಸ್ಯರ ಪಟ್ಟಿಯನ್ನು ಬಿಡುಗಡೆ ಮಾಡಲಿದೆ ಎಂದು ಕೇಳಿ ಬಂದಿದೆ. ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ಅಧಿಕೃತ ನಿವಾಸದಲ್ಲಿ ಇಂದು ರಾಜ್ಯಸಭಾ ಸ್ಥಾನಗಳ ಚರ್ಚೆಯ ಸಭೆ ನಡೆಯಲಿದೆ ಎಂದು ಮೂಲಗಳು ಹೇಳಿವೆ.

Font Awesome Icons

Leave a Reply

Your email address will not be published. Required fields are marked *