ದೆಹಲಿ ಗಡಿಭಾಗದಲ್ಲಿ ಉದ್ವಿಗ್ನ ಪರಿಸ್ಥಿತಿ; ಸರ್ಕಾರಕ್ಕೆ ಎಚ್ಚರಿಕೆ!

ನವದೆಹಲಿ: ತಮ್ಮ ಬೇಡಿಕೆ ಈಡೇರಿಸಲು ರಾಷ್ಟ್ರ ರಾಜಧಾನಿಗೆ ಸಾವಿರಾರು ರೈತರ ಹಸಿರು ಸೇನೆ ಲಗ್ಗೆ ಇಡುತ್ತಿದೆ. ಪಂಜಾಬ್, ಹರಿಯಾಣ, ಕರ್ನಾಟಕ, ಕೇರಳದಿಂದ ರೈತರ ದಂಡು ದೆಹಲಿಯ ಗಡಿಭಾಗವನ್ನು ತಲುಪಿದೆ. ರಸ್ತೆಯುದ್ದಕ್ಕೆ ಸಾಲು, ಸಾಲು ಟ್ರ್ಯಾಕ್ಟರ್‌ಗಳು ದೆಹಲಿಯತ್ತ ಧಾವಿಸುತ್ತಾ ಇದ್ರೆ ಪೊಲೀಸರು ರೈತರನ್ನ ತಡೆಯಲು ಮುಳ್ಳಿನ ಕೋಟೆಯನ್ನೇ ನಿರ್ಮಿಸಿದ್ದಾರೆ.

ದೆಹಲಿಯ ಗಡಿಗಳಲ್ಲಿ ರೈತರು ಪ್ರವೇಶ ಮಾಡದಂತೆ ರಸ್ತೆಗೆ ಮುಳ್ಳುತಂತಿಯ ಬೇಲಿ, ರಸ್ತೆಗೆ ಕಾಂಕ್ರೀಟ್ ಗೋಡೆ ಕಟ್ಟಿ ಬಂದ್ ಮಾಡಲಾಗಿದೆ. ಸಾವಿರಾರು ರೈತರು ಜಮಾಯಿಸುತ್ತಾ ಇರೋದ್ರಿಂದ ದೆಹಲಿ-ನೋಯ್ಡಾ ಗಡಿಯ ಡಿಎನ್‌ಡಿ ರಸ್ತೆಯಲ್ಲಿ ಭಾರಿ ಟ್ರಾಫಿಕ್ ಜಾಮ್ ಆಗಿದೆ. ರೈತರು ದೆಹಲಿ ಪ್ರವೇಶಿಸದಂತೆ ರಸ್ತೆಗಳನ್ನು ಬಂದ್ ಮಾಡಿರುವ ಕಾರಣ ಕಿಲೋ ಮೀಟರ್ ಕ್ರಮಿಸೋದು ಕಷ್ಟವಾಗಿದೆ.

ರಾಷ್ಟ್ರ ರಾಜಧಾನಿಯಲ್ಲಿ ಅನ್ನದಾತರ ಪ್ರತಿಭಟನಾ ಕಹಳೆ ಮೊಳಗಿದೆ. ಬೆಂಬಲ ಬೆಲೆ, ವಿವಿಧ ಬೇಡಿಕೆಗಳ ಇಡೇರಿಕೆಗೆ ಆಗ್ರಹಿಸಿ ಅನ್ನದಾತರು ಫೀಲ್ಡ್​ಗಿಳಿದಿದ್ದಾರೆ. ರೈತರು ದೆಹಲಿಗೆ ಟ್ರ್ಯಾಕ್ಟರ್​ ಮೂಲಕ ಎಂಟ್ರಿಕೊಡ್ತಿರೋದನ್ನ ಕಂಡು, ಹರಿಯಾಣದ ಅಂಬಾಲದಲ್ಲಿರುವ ಶಂಭುಗಡಿಯಲ್ಲಿ ರೈತರನ್ನ ತಡೆಯಲು ಪೊಲೀಸರು ಅಶ್ರುವಾಯು ಸಿಡಿಸಿದ್ದಾರೆ. ಇದರಿಂದ ದೆಹಲಿ, ಹರಿಯಾಣ ಗಡಿಭಾಗದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.

 

Font Awesome Icons

Leave a Reply

Your email address will not be published. Required fields are marked *