ಉತ್ತರ ಪ್ರದೇಶ: ನಟಿ ಜಯಪ್ರದಾ 2019ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ಉತ್ತರ ಪ್ರದೇಶದ ರಾಂಪುರ್ ಪೊಲೀಸರಿಗೆ ಕೋರ್ಟ್ ಆದೇಶ ನೀಡಿದೆ. ಜಾಮೀನು ರಹಿತ ವಾರೆಂಟ್ ಕಳುಹಿಸಿದೆ.
ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣದಲ್ಲಿ ಒಟ್ಟು ಏಳು ಬಾರಿ ನೋಟಿಸ್ ಕೊಟ್ಟರು ಜಯಪ್ರದಾ ಕೋರ್ಟ್ ಗೆ ಹಾಜರಾಗಿಲ್ಲ.
ಎರಡು ಪ್ರತ್ಯೆಕ ಪ್ರಕರಣಗಳಲ್ಲಿ ಜಯ ಪ್ರದಾ ಮೇಲೆ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದರು. ಜಯ ಪ್ರದಾರನ್ನ ಬಂಧನಕ್ಕಾಗಿ ವಿಶೇಷ ತಂಡ ರಚಿಸುವಂತೆ ಸೂಚನೆ ನೀಡಿದೆ. ಫೆಬ್ರವರಿ 27ರಂದು ರಾಂಪುರ್ ಕೋರ್ಟ್ ಮುಂದೆ ಹಾಜರುಪಡಿಸಲು ಆದೇಶಿಸಿದೆ.
ನಟಿಯನ್ನು ಬಂಧನ ಮಾಡಿ ಕೋರ್ಟ್ ಮುಂದೆ ಹಾಜರುಪಡಿಸಲು ರಾಂಪುರ್ ಪೊಲೀಸರಿಗೆ ಸೂಚನೆ ನೀಡಿದೆ.