ಹುಬ್ಬಳ್ಳಿ: ರಾಜ್ಯ ಸರ್ಕಾರದಲ್ಲಿ ತಾಳ ಮೇಳವಿಲ್ಲದಂತಾಗಿದೆ. ಅಧಿಕಾರಿಗಳು – ಸಚಿವರ ನಡುವೆ ಸಂವಹನದ ಕೊರತೆ ಎದ್ದು ಕಾಣುತ್ತಿದೆ. ಅದರಿಂದಾಗಿಯೇ ಘೋಷವಾಕ್ಯ ವಿವಾದ ಸೃಷ್ಟಿಯಾಗಿದೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು.
ಜ್ಞಾನ ದೇಗುಲವಿದು ಕೈ ಮಗಿದು ಒಳಗೆ ಬಾ ಘೋಷವಾಕ್ಯ ಬದಲಾವಣೆ ವಿಚಾರಕ್ಕೆ ಕಿಡಿ ಕಾರಿದ ಶೆಟ್ಟರ್, ಇದನ್ನೆಲ್ಲ ನೋಡಿದ್ರೆ ಸರ್ಕಾರ ಅತಂತ್ರ ಸ್ಥಿತಿಯಲ್ಲಿದೆ ಅನಿಸುತ್ತೆ. ಕಾರ್ಯದರ್ಶಿಗಳು ಆದೇಶ ಮಾಡಿದ್ದಾರೆ ಅಂತಾರೆ ಮಂತ್ರಿ ಮಂಡಲದಲ್ಲಿ ಚರ್ಚೆ ಮಾಡಿದ್ದಾರಾ..? ಮಂತ್ರಿಗಳು ಅಧಿಕಾರಿಗಳ ನಡುವೆ ಸಮನ್ವಯವೇ ಇಲ್ಲ. ಯಾಕೆ ಕುವೆಂಪು ಅವರ ಘೋಷವಾಕ್ಯ ಬದಾಲವಣೆ ಮಾಡಬೇಕು. ಅಕಸ್ಮಾತ್ ಬದಲಾವಣೆ ಮಾಡೋದೆ ಇದ್ರೆ ಚರ್ಚೆ ಮಾಡಿ ಮಾಡಿ ಎಂದರು.