ಎಲ್ಲೂ ಸಿಗುತ್ತಿಲ್ಲ ಭಾರತ್ ಅಕ್ಕಿ: ಇದು ಚುನಾವಣೆ ಗಿಮಿಕ್ ಎಂದ ಸಾರ್ವಜನಿಕರು

ಬೆಂಗಳೂರು: ಅಕ್ಕಿ ಬೆಲೆ ಏರಿಕೆ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ಭಾರತ್ ಬ್ರ್ಯಾಂಡ್ ಯೋಜನೆಯಡಿ ಭಾರತ್ ಅಕ್ಕಿ ಯೋಜನೆಯನ್ನ ಮೊಬೈಲ್ ವ್ಯಾನ್‌ಗಳ ಮೂಲಕ ಕರ್ನಾಟಕ ರಾಜ್ಯದಲ್ಲಿ ಚಾಲನೆ ನೀಡಿತ್ತು. ಆದರೆ ಆರಂಭಿಕ ದಿನಗಳಲ್ಲೆ ಅಕ್ಕಿ ಸಿಗದೇ ಗ್ರಾಹಕರು ಕಂಗಾಲಾಗಿದ್ದಾರೆ.

ಕೆಜಿಗೆ 29 ರೂಪಾಯಿಯಂತೆ ಒಬ್ಬ ವ್ಯಕ್ತಿ‌10 ಕೆಜಿ ಅಕ್ಕಿ ಪಡೆಯಬಹುದಿತ್ತು. ಆದರೆ ಇನ್ನೂ ತಿಂಗಳುಗಳೆ ಕಳೆದಿಲ್ಲ ಜನರ ಬೇಡಿಕೆಗೆ ತಕ್ಕಂತೆ ಭಾರತ್ ಅಕ್ಕಿ ಸಿಗುತ್ತಿಲ್ಲ.

ಹೀಗಾಗಿ ಕೇಂದ್ರ ಸರ್ಕಾರ ಪೂರ್ವ ಸಿದ್ಧತೆ ಇಲ್ಲದೇ ಭಾರತ್ ಅಕ್ಕಿ ಯೋಜನೆ ಜಾರಿಗೆ ತಂದಿದೆ. ಪ್ರಚಾರ ಪಡೆದುಕೊಳ್ಳಲು ಗಿಮಿಕ್ ಅಷ್ಟೇ ಅಂತ ಸಾರ್ವಜನಿಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಈ‌ ಬಗ್ಗೆ ನೆಫೆಡ್ ಮುಖ್ಯಸ್ಥ ಜ್ಯೋತಿ ಪಾಟೀಲ್ ಅವರನ್ನು ಸಂಪರ್ಕಿಸಿದರೆ ನಾಫೆಡ್ ಸೇರಿದಂತೆ ಎನ್‌ಸಿ‌ಸಿ‌ಎಫ್, ಕೇಂದ್ರೀಯ ಭಂಡಾರ್ ಮೂಲಕ ಅಕ್ಕಿ ರಾಜ್ಯದಲ್ಲಿ ಮಾರಾಟ ಆಗುತ್ತಿದೆ. ಬೆಂಗಳೂರು ಅಷ್ಟೇ ಅಲ್ಲದೇ ರಾಜ್ಯಾದ್ಯಂತ ಅಕ್ಕಿ ಮಾರಾಟ ಮಾಡಲಾಗುತ್ತಿದೆ. ಸ್ಟಾಕ್ ಬರುತ್ತಿದೆ ಪ್ರತಿದಿನ ಮಾರಾಟ ಆಗುತ್ತಿದೆ. ಮುಂದಿನ ದಿನಗಳಲ್ಲಿ ಅಕ್ಕಿ ಹೆಚ್ಚಿನ ಪ್ರಮಾಣದಲ್ಲಿ ದೊರೆಯಲಿದೆ ಎನ್ನುತ್ತಾರೆ.

ಇನ್ನೂ ಅಕ್ಕಿ ಖರೀದಿಗೆ ಯಾವುದೇ ಆಧಾರ ಕಾರ್ಡ್, ಬಿಪಿಎಲ್, ಎಪಿಎಲ್ ಕಾರ್ಡ್ ನ ಅವಶ್ಯಕತೆ ಇರುವುದಿಲ್ಲ ತಮ್ಮ ಮೊಬೈಲ್ ನಂಬರ್ ರಿಜಿಸ್ಟರ್ ಮಾಡುವ ಮೂಲಕ ಅಕ್ಕಿ ಖರೀದಿಸಬಹುದಾಗಿದ್ದು, ರಿಲಯನ್ಸ್​​, ಫ್ಲಿಪ್​​ಕಾರ್ಟ್​, ಬಿಗ್​ ಬಾಸ್ಕೆಟ್​ ಸೇರಿದಂತೆ ಆನ್​ಲೈನ್​ನಲ್ಲಿ ಭಾರತ್ ಬ್ರ್ಯಾಂಡ್ ಅಕ್ಕಿ ಖರೀದಿ ಮಾಡಬಹುದಾಗಿದೆ.

Font Awesome Icons

Leave a Reply

Your email address will not be published. Required fields are marked *