ಬೆಂಗಳೂರು: ಬೆಳ್ಳುಳ್ಳಿ ನಂತರ ಈಗ ಗ್ರಾಹಕರ ಜೇಬಿಗೆ ಕತ್ತರಿ ಹಾಕಲು ಈರುಳ್ಳಿ ಅಣಿಯಾಗಿ ನಿಂತಿದ್ದು, ಗೃಹಿಣಿಯರ ಕೈಗೆ ಎಟುಕದೇ ಅಡುಗೆಮನೆ ಸಾಮ್ರಾಜ್ಯವನ್ನೂ ಸುಪರ್ದಿಗೆ ಪಡೆಯಲು ಈರುಳ್ಳಿ ಸಜ್ಜಾಗಿದೆ.
ಈರುಳ್ಳಿ ಮೇಲಿನ ರಫ್ತು ನಿಷೇಧವನ್ನ ತೆಗದುಹಾಕಲು ಕೇಂದ್ರ ಸರ್ಕಾರ ಸಜ್ಜಾಗಿದೆ ಅಂತ ಹೇಳಲಾಗ್ತಿದೆ. ಈ ಹಿನ್ನಲೆ ದೇಶದಲ್ಲಿ ಈರುಳ್ಳಿ ದರ ಏರಿಕೆ ಕಂಡಿದೆ.
ದೇಶದ ಅತಿದೊಡ್ಡ ಸಗಟು ಈರುಳ್ಳಿ ಮಾರುಕಟ್ಟೆಯಾದ ಲಸಲ್ಗಾಂವ್ನಲ್ಲಿ ಸಾಮಾನ್ಯ ಈರುಳ್ಳಿಯ ಸಗಟು ಮಾರಾಟ ದರ ಕ್ಷಿಂಟಾಲ್ಗೆ 1800 ರೂಪಾಯಿ ಏರಿಕೆ ಕಂಡಿದೆ. ಈ ಮೂಲಕ ಶೇ.40ರಷ್ಟು ಈರುಳ್ಳಿ ಬೆಲೆಯಲ್ಲಿ ಹೆಚ್ಚಳ ಕಂಡಿದೆ.
ಇದೇ ಈರುಳ್ಳಿ ದರ ಫೆಬ್ರವರಿ 17ರಂದು ಕ್ವಿಂಟಾಲ್ಗೆ 1,280 ರೂಪಾಯಿ ಇದ್ದಿದ್ದು ಕೇವಲ ಮೂರೇ ದಿನಕ್ಕೆ 520 ರೂಪಾಯಿಯಷ್ಟು ಹೆಚ್ಚಳವಾಗಿದೆ.
ದೇಶದ ಪ್ರಮುಖ ನಗರಗಳಲ್ಲಿ ಬೆಳ್ಳುಳ್ಳಿ ದರ ಕೆ.ಜಿಗೆ 500 ರೂಪಾಯಿ ದಾಟಿದೆ. ಮಹಾರಾಷ್ಟ್ರದಲ್ಲಿ ಪ್ರತಿ ಕೆ.ಜಿ ಬೆಳ್ಳುಳ್ಳಿ ಬೆಲೆ 600 ರೂಪಾಯಿಯಾಗಿದೆ. ರಾಜ್ಯದಲ್ಲೂ ಬೆಳ್ಳುಳ್ಳಿ ಬೆಲೆ 540 ರೂಪಾಯಿಯಾಗಿದ್ದು, ಗ್ರಾಹಕರು ಕಂಗಾಲಾಗಿದ್ದಾರೆ.
ಒಟ್ಟಿನಲ್ಲಿ 600 ರೂಪಾಯಿ ಸನಿಹದಲ್ಲಿರೋ ಬೆಳ್ಳುಳ್ಳಿಗೆ ಠಕ್ಕರ್ ಕೊಡೋಕೆ ಈರುಳ್ಳಿ ಸಹ ಸಜ್ಜಾಗಿ ನಿಂತಿದ್ದು, ಗ್ರಾಹಕರ ಕಣ್ಣಲ್ಲಿ ನೀರು ತರಿಸಲು ಅಣಿಯಾಗಿದೆ.