ಸ್ವೀಡನ್: ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿ ಟೆಸ್ಲಾ ಹಾಗೂ ಸ್ಪೇಸ್ ಎಕ್ಸ್ ಸಿಇಒ ಎಲಾನ್ ಮಸ್ಕ್ ಹೆಸರು ಪ್ರತಿಷ್ಠಿತ ನೊಬೆಲ್ ಶಾಂತಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದೆ. ರಷ್ಯಾ-ಉಕ್ರೇನ್ ಯುದ್ಧ ನಡೆಯುತ್ತಿರುವಾಗ ಉಕ್ರೇನ್‌ಗೆ ಸ್ಟಾರ್ ಲಿಂಕ್ ಮೂಲಕ ಇಂಟರ್ನೆಟ್ ಹಾಗು ಸಂವಹನ ಸೇವೆ ಒದಗಿಸಿದ ಇವರು ಸ್ವಾತಂತ್ರ್ಯದ ಸಮರ್ಥ ಪ್ರತಿಪಾದಕರಾಗಿದ್ದಾರೆ.
ನೊಬೆಲ್ ಶಾಂತಿ ಪ್ರಶಸ್ತಿಗೆ ಮಸ್ಕ್ ಹೆಸರನ್ನು ನಾರ್ವೆಯ ಸಂಸದ ನಿಲ್ಸೆನ್ ನಾಮನಿರ್ದೇಶನ ಮಾಡಿದ್ದಾರೆ.
ರಷ್ಯಾ ಆಕ್ರಮಣವನ್ನು ಎದುರಿಸುವಲ್ಲಿ ಉಕ್ರೇನಿಗೆ ಸಹಕಾರಿಯಾಗುವಂತೆ ಸ್ಟಾರ್‌ಲಿಂಕ್ ಮೂಲಕ ಇಂಟರ್ನೆಟ್ ಸೇವೆಯನ್ನು ಒದಗಿಸಲಾಗಿತ್ತು. ಉಕ್ರೇನಿನಲ್ಲಿ ಸಂವಹನ ಹಾಗು ದಾಳಿಯನ್ನು ಎದುರಿಸುವ ಶಕ್ತಿಯನ್ನು ಇದು ಹೆಚ್ಚಿಸುವ ಮೂಲಕ ನೆರವಾಗಿತ್ತು ಎಂದು ಮಾರಿಷಸ್ ಹೇಳಿದ್ದಾರೆ.
ಎಲಾನ್ ಮಸ್ಕ್ ಹುಟ್ಟುಹಾಕಿರುವ ಸಂಸ್ಥೆಗಳು ನೀಡುತ್ತಿರುವ ಸೇವೆಗಳ ಪೈಕಿ ಮುಕ್ತ ವಾಕ್ ಸ್ವಾತಂತ್ರ್ಯ, ಜಾಗತಿಕ ಸಂಪರ್ಕ ಪ್ರಮುಖವಾಗಿದೆ. ಇದರಿಂದ ವಿಚಾರಗಳನ್ನು ವಿನಿಮಯ ಮಾಡಿಕೊಳ್ಳಲು, ಕಲಿಯಲು, ದೇಶದ ಯುವ ಸಮುದಾಯಕ್ಕೆ ತಿಳುವಳಿಕೆ ಬೆಳೆಸಲು ಇದು ಅನುವು ಮಾಡಿಕೊಡುತ್ತದೆ. ಇದು ಜಾಗತಿಕ ಸಮೃದ್ಧಿ ಹಾಗೂ ಶಾಂತಿಗೆ ಅತ್ಯವಶ್ಯಕವಾಗಿದೆ ಎಂದು ನಾರ್ವೆ ಸಂಸದ ಹೇಳಿದ್ದಾರೆ.
ನೊಬೆಲ್‌ಗೆ ನಾಮನಿರ್ದೇಶನಗೊಂಡ ಹೆಸರುಗಳನ್ನು ಮಾರ್ಚ್‌ನಲ್ಲಿ ಪಟ್ಟಿ ಮಾಡಿ ಹಲವು ಸುತ್ತಿನ ಆಯ್ಕೆ ಪ್ರಕ್ರಿಯೆಗಳು ನಡೆಯಲಿವೆ. ಅಕ್ಟೋಬರ್ ತಿಂಗಳಲ್ಲಿ ಅಂತಿಮ ಪಟ್ಟಿಯನ್ನು ಘೋಷಿಸಲಾಗುತ್ತದೆ.