ಪಿಡಿಓಗಳ ಮೇಲೆ ಸಿಇಓ ಕಿರುಕುಳ: ಸಾಮೂಹಿಕ ರಾಜೀನಾಮೆಗೆ ಮುಂದಾದ ಪಿಡಿಓಗಳು

ಬೀದರ್: ಜಿಲ್ಲೆಯ ಗ್ರಾಮ ಪಂಚಾಯತಿಅಭಿವ್ರದ್ದಿ ಅಧಿಕಾರಿಗಳಿಗೆ ವಿನಾ ಕಾರಣ ಕಿರಕುಳ ನೀಡುತಿದ್ದಾರೆಂದು ಆರೋಪಿಸಿ ನಗರದಲ್ಲಿಯ ಕರ್ನಾಟಕ ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಕಚೇರಿಯಿಂದ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ಇಲಾಖೆಯ ಸಿಬ್ಬಂದಿಯಿಂದ ಪ್ರತಿಭಟನೆ ನಡೆಸಿದರು.

ಇದೆ ವೇಳೆ ಸಂಘದ ಅಧ್ಯಕ್ಷ ಶರತ ಅವರು ಮಾತನಾಡಿ, ಒಂದು ವರುಷದಿಂದ ಸರಕಾರದಿಂದ ಅನುದಾನ ಬಂದಿರುವುದಿಲ್ಲ. ಆದರು ಸಹ ಗ್ರಾಮಿಣ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗಂತೆ ಜವಾಬ್ದಾರಿಯಿಂದ ಕರ್ತವ್ಯ ನಿರವಹಿಸುತಿರುವದಾಗಿ ಎಂದರು. ಹೊಸದಾಗಿ ಬಂದಿರುವ ಸಿ.ಇ.ಓ.ಅವರು ಕೊಡುತ್ತಿರುವ ಕಿರಕುಳ ಖಂಡಿಸಿ ಸಾಮೂಹಿಕ ರಾಜಿನಾಮೆ ನೀಡುತಿರುವದಾಗಿ ಎಂದು ಹೆಳಿದರು.

ಪಿಡಿಓ ವಿರುದ್ಧ ಸಿಇಓ ಕ್ರಿಮಿನಲ್ ಮೊಕದ್ದಮೆ ಹಾಕಿರುವ ಪ್ರಯುಕ್ತ ಪಿಡಿಓ ಆತ್ಮಹತ್ಯೆಗೆ ಯತ್ನ ಮಾಡಿರುತಾರೆ ಎಂದರು.
ಔರಾದ್ ತಾಲೂಕಿನ ಚಿಕ್ಲಿ(ಜೆ) ಗ್ರಾಮದ ಪಿಡಿಓ ಸಂಗಾರೆಡ್ಡಿ ಆತ್ಮಹತ್ಯೆಗೆ ಶರಣಾಗಲು ಪ್ರಯತ್ನ ನಡೆಸಿರುತ್ತಾರೆ ಎಂದರು.

Font Awesome Icons

Leave a Reply

Your email address will not be published. Required fields are marked *