ನವದೆಹಲಿ: ಭಾರತದ ಸೇನೆಯನ್ನು ಆಧುನೀಕರಣಗೊಳಿಸಿ ಬಲಪಡಿಸುವ ಕಾರ್ಯದಲ್ಲಿ ತೊಡಗಿರುವ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನೌಕಾಪಡೆಗಾಗಿ ೨೦೦ಕ್ಕೂ ಅಧಿಕ ಬ್ರಹ್ಮೋಸ್ ಕ್ಷಿಪಣಿಗಳನ್ನು ಖರೀದಿಸಲು ಮುಂದಾಗಿದೆ. ಇದಕ್ಕೆ ೧೯೦೦೦ ಕೋಟಿ ರೂ. ಖರ್ಚಾಗಲಿದೆ.
ಶಬ್ದಕ್ಕಿಂತ ಎರಡು ಪಟ್ಟು ವೇಗವಾಗಿ ಹಾರುವ ಈ ಕ್ಷಿಪಣಿಗಳು ಗುರಿಯನ್ನು ನಿಖರವಾಗಿ ಭೇದಿಸುವಲ್ಲಿ ಸಮರ್ಥವಾಗಿವೆ. ಇವುಗಳನ್ನು ಭಾರತ ಹಾಗು ರಷ್ಯಾದ ಮಿಲಿಟರಿ ಒಪ್ಪಂದದ ಅಡಿಯಲ್ಲಿ ನಿರ್ಮಿಸಲಾಗುತ್ತಿದ್ದು, ನೌಕಾಪಡೆಯ ಎಲ್ಲಾ ಯುದ್ಧನೌಕೆಗಳಲ್ಲಿ ಸೂಪರ್ಸಾನಿಕ್ ಬ್ರಹ್ಮೋಸ್ ಕ್ಷಿಪಣಿಗಳನ್ನು ನಿಯೋಜಿಸಲಾಗಿದೆ. ಇವುಗಳನ್ನು ಭೂಮಿ, ವಾಯು ಹಾಗು ಜಲಾಂತರ್ಗಾಮಿ ನೌಕೆಗಳಿಂದಲೂ ಹಾರಿಸಬಹುದು.
ಪ್ರಸ್ತುತ ಕ್ಷಿಪಣಿಯ ಬಹುಪಾಲು ಭಾಗಗಳನ್ನು ಬ್ರಹ್ಮೋಸ್ ಏರೋಸ್ಪೇಸ್ ದೇಶದಲ್ಲೇ ತಯಾರಿಸುತ್ತಿದೆ. ಇವುಗಳ ಖರೀದಿಗೆ ಫಿಲಿಪೈನ್ಸ್ ಸಹಿ ಹಾಕಿದೆ.