ಸಮಾಜವಾದಿ ಪಕ್ಷದ ‘ಸಂಸದ ಶಫಿಕುರ್ ರೆಹಮಾನ್ ಬಾರ್ಕ್’ ನಿಧನ

ನವದೆಹಲಿ: ಸಮಾಜವಾದಿ ಪಕ್ಷದ ಸಂಸದ ಶಫಿಕುರ್ ರೆಹಮಾನ್ ಬಾರ್ಕ್ (94) ದೀರ್ಘಕಾಲದ ಅನಾರೋಗ್ಯದ ನಂತರ ನಿಧನರಾದರು. ಬಾರ್ಕ್ ಅವರು ಸಂಸತ್ತಿನ ಅತ್ಯಂತ ಹಿರಿಯ ಸಂಸದರಾಗಿದ್ದರು.

ಸಮಾಜವಾದಿ ಪಕ್ಷದ ಸಂಭಾಲ್ ಸಂಸದ ಶಫಿಕುರ್ ರೆಹಮಾನ್ ಬಾರ್ಕ್ ದೀರ್ಘಕಾಲದ ಅನಾರೋಗ್ಯದ ನಂತರ ಇಂದು ಮೊರಾದಾಬಾದ್ನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಅವರಿಗೆ 94 ವರ್ಷ ವಯಸ್ಸಾಗಿತ್ತು. 2024 ರ ಲೋಕಸಭಾ ಚುನಾವಣೆಗೆ ಸಮಾಜವಾದಿ ಪಕ್ಷವು ಸಂಭಾಲ್ನಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸಿತ್ತು.

ಇವರು 5 ಬಾರಿ ಸಂಸದರಾಗಿದ್ದಾರೆ. ಫೆಬ್ರವರಿ 21 ರಂದು ಎಸ್ಪಿ ಅಧ್ಯಕ್ಷ ಅಖಿಲೇಶ್ ಯಾದವ್ ಅವರು ಮೊರಾದಾಬಾದ್ನ ಖಾಸಗಿ ಆಸ್ಪತ್ರೆಗೆ ತೆರಳಿ ಸಂಸದರ ಸ್ಥಿತಿಯ ಬಗ್ಗೆ ವಿಚಾರಿಸಿದ್ದರು. ಈ ಬಗ್ಗೆ ಎಕ್ಸ್‌ ನಲ್ಲಿ ಮಾಹಿತಿ ಹಂಚಿಕೊಂಡಿದ್ದರು.  ಎಸ್ಪಿ ಸಂಸದ ಕಳೆದ ಒಂದು ತಿಂಗಳಿನಿಂದ ಮೊರಾದಾಬಾದ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸಮಾಜವಾದಿ ಪಕ್ಷದ ಹಿರಿಯ ನಾಯಕ ಮತ್ತು ಹಲವಾರು ಬಾರಿ ಸಂಸದರಾಗಿದ್ದ ಶಫಿಕುರ್ ರೆಹಮಾನ್ ಬಾರ್ಕ್ ಸಾಹೇಬ್ ಅವರ ನಿಧನವು ಅತ್ಯಂತ ದುಃಖಕರವಾಗಿದೆ ಎಂದು ಅಖಿಲೇಶ್ ಯಾದವ್ ಸಂತಾಪ ಸೂಚಿಸಿದ್ದಾರೆ.

Font Awesome Icons

Leave a Reply

Your email address will not be published. Required fields are marked *