ಇಸ್ಲಾಮಾಬಾದ್: ಈಗಾಗಲೇ ಬಂಧನದಲ್ಲಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನು ಮತ್ತು ಅವರ ಮೂರನೇ ಮಡದಿ ಬುಶ್ರಾ ಬೀಬಿ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ.
ಅಲ್-ಖಾದಿರ್ ಟ್ರಸ್ಟ್ ಭ್ರಷ್ಟಾರ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಷನಲ್ ಅಕೌಂಟೆಬಿಲಿಟಿ ಬ್ಯೂರೋ ನ್ಯಾಯಾಲಯ ದೋಷಾರೋಪ ನಿಗದಿ ಮಾಡಿದೆ.
ರಾವಲ್ಪಿಂಡಿಯ ಆಡಿಯಾಲ ಕಾರಾಗೃಹದಲ್ಲಿ ನ್ಯಾಯಾಧೀಶ ನಾಸಿರ್ ಜಾವೇದ್ ರಾಣಾ ವಿಚಾರಣೆ ನಡೆಸಿ, ದಂಪತಿಯ ಎದುರು ದೋಷಾರೋಪ ಪಟ್ಟಿ ಓದಿದರು. ಖಾನ್ ಮತ್ತು ಬೀಬಿ ಆರೋಪಗಳನ್ನು ಅಲ್ಲಗಳೆದಿದ್ದು, ವಿಚಾರಣೆಯನ್ನು ಮಾ.೬ಕ್ಕೆ ಮುಂದೂಡಲಾಗಿದೆ.
೨೦೧೮ರಲ್ಲಿ ಖಾನ್ ದಂಪತಿ ಸ್ಥಾಪಿಸಿದ ಅಲ್-ಖಾದಿರ್ ಸಂಸ್ಥೆ, ರಿಯಲ್ ಎಸ್ಟೇಟ್ ಡೆವೆಲಪರ್ ಮಲಿಕ್ ರಿಯಾಜ್ ಹುಸೇನ್ರಿಂದ ಲಂಚವಾಗಿ ೬೦ ಎಕರೆ ಭೂಮಿ ಪಡೆದಿದೆ ಎಂದು ಆರೋಪ.