IND vs ENG Test: ಇಂಗ್ಲೆಂಡ್ ಸರಣಿ ಆಡಲು ನೋ ಎಂದ ಇಶಾನ್ ಕಿಶನ್‌ಗೆ ಸಂಕಷ್ಟ

ಭಾರತೀಯ ಕ್ರಿಕೆಟಿಗ ಇಶಾನ್ ಕಿಶನ್‌ ಈಗಾಗಲೇ ಬಿಸಿಸಿಐನ  ಕೋಪಕ್ಕೆ ಗುರಿಯಾಗಿದ್ದರು. ಇದೀಗ  ಅದೇ ರೀತಿ ಮತ್ತೊಮ್ಮೆ ಆ ಸನ್ನಿವೇಷ ಬಂದಿದೆ.   ಬಿಸಿಸಿಐ ವಾರ್ಷಿಕ ಗುತ್ತಿಗೆ ಪಟ್ಟಿಯಿಂದ ಕೈಬಿಟ್ಟ ನಂತರ ಭಾರತ ಕ್ರಿಕೆಟಿಗರಾದ ಇಶಾನ್ ಕಿಶನ್ ಅವರ ಭವಿಷ್ಯವು ಅಪಾಯದಲ್ಲಿದೆ. ಕಿಶನ್ ಮಾನಸಿಕ ಆಯಾಸದಿಂದ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಿಂದ ಹಿಂದೆ ಸರಿದಿದ್ದರು ಮತ್ತು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯನ್ನು ಕೂಡ ಆಡಲಿಲ್ಲ. ಆಟಗಾರರಿಗೆ ರಾಷ್ಟ್ರೀಯ ತಂಡದಲ್ಲಿ ಆಡಲು ಅವಕಾಶವಿಲ್ಲದಿದ್ದರೆ ದೇಶೀಯ ಕ್ರಿಕೆಟ್‌ನಲ್ಲಿ ತಮ್ಮ ರಾಜ್ಯ ತಂಡಗಳನ್ನು ಪ್ರತಿನಿಧಿಸಲು ಬಿಸಿಸಿಐ ಆದೇಶವನ್ನು ಹೊರಡಿಸಿತು. ಆದಾಗ್ಯೂ, ಇಶಾನ್ ಇದಕ್ಕೆ ಯಾವುದೇ ಗಮನ ಕೊಡಲಿಲ್ಲ ಮತ್ತು ಪಾಂಡ್ಯ ಸಹೋದರರೊಂದಿಗೆ ಐಪಿಎಲ್ 2024 ಕ್ಕಾಗಿ ತಯಾರಿ ನಡೆಸಲು ಬರೋಡಾಕ್ಕೆ ತೆರಳಿದರು.

ಕಿಶನ್‌ನ ಈ ವರ್ತನೆಯಿಂದ ಕೋಪಗೊಂಡ ಬಿಸಿಸಿಐ ಅವರನ್ನು ವಾರ್ಷಿಕ ಒಪ್ಪಂದದಿಂದ ಕೈಬಿಟ್ಟಿತು. ಕಿಶನ್‌ ಅಲ್ಲದೆ ಬರೋಡಾ ವಿರುದ್ಧದ ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್‌ನಲ್ಲಿ ಮುಂಬೈ ಪರ ಆಡದ ಕಾರಣ ಇಶಾನ್ ಕಿಶನ್ ಮಾತ್ರವಲ್ಲದೆ ಶ್ರೇಯಸ್ ಅಯ್ಯರ್ ಕೂಡ ಬಿಸಿಸಿಐಯ ಕಠಿಣ ಕ್ರಮವನ್ನು ಎದುರಿಸಿದರು ಮತ್ತು ಇಬ್ಬರನ್ನೂ ಒಪ್ಪಂದದಿಂದ ಕೈಬಿಡಲಾಯಿತು.

ಇದಕ್ಕೆ ಕಾರಣವೇನೆಂದು ಸ್ಪಷ್ಟವಿಲ್ಲ ಆದರೆ ಅವರನ್ನು ಒಪ್ಪಂದದಿಂದ ಕೈ ಬಿಟ್ಟಿರುವುದು ಖಚಿತಪಡಿಸಲಾಗಿದೆ. ಈಗ, ESPNCricnfo ನಲ್ಲಿನ ವರದಿಯ ಪ್ರಕಾರ, ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಸಮಯದಲ್ಲಿ ಬಿಸಿಸಿಐ ಇಶಾನ್ ಕಿಶನ್ ಅವರನ್ನು ಸಂಪರ್ಕಿಸಿದೆ ಎಂದು ತಿಳಿದುಬಂದಿದೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಆಡಿ ಎಂದು ಬಿಸಿಸಿಐ ಕಿಶನ್ ಬಳಿ ಕೇಳಿದೆ. ಆದರೆ ವಿಕೆಟ್ ಕೀಪರ್-ಬ್ಯಾಟರ್ ಇದಕ್ಕೂ ನೋ ಎಂದಿದ್ದಾರೆ. ನಾನು ಇನ್ನೂ ಟೆಸ್ಟ್ ಕ್ರಿಕೆಟ್ ಆಡಲು ಸಿದ್ಧವಾಗಿಲ್ಲ ಎಂದು ಹೇಳಿದ್ದರಂತೆ. ಕಿಶನ್ ನಿರಾಕರಿಸಿದ ನಂತರ, ಮಂಡಳಿಯು ಧ್ರುವ್ ಜುರೆಲ್ ಅವರನ್ನು ಕೆಎಸ್ ಭರತ್‌ಗೆ ಬ್ಯಾಕ್‌ಅಪ್ ವಿಕೆಟ್‌ಕೀಪರ್ ಆಗಿ ಆಯ್ಕೆ ಮಾಡಿತು.

ಇದೀಗ, ಭಾರತ- ಇಂಗ್ಲೆಂಡ್ ಐದನೇ ಟೆಸ್ಟ್‌ ಪಂದ್ಯ ಮಾರ್ಚ್ 7 ರಿಂದ ಶುರುವಾಗಲಿದೆ.

 

Font Awesome Icons

Leave a Reply

Your email address will not be published. Required fields are marked *