ಮಾ.4 ರಂದು ಅಶೋಕಪುರಂ ರೈಲು ನಿಲ್ದಾಣದ ಉನ್ನತೀಕರಿಸಿದ ಸೌಲಭ್ಯಗಳ ಸಮರ್ಪಣಾ ಕಾರ್ಯಕ್ರಮ. – Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್

website developers in mysore

ಮೈಸೂರು,ಮಾರ್ಚ್,2,2024(www.justkannada.in): ಮಾರ್ಚ್ 4 ರಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಅವರು ನಗರದ ಅಶೋಕಪುರಂ ರೈಲು ನಿಲ್ದಾಣದ ಎರಡನೇ ಪ್ರವೇಶ ಸೇರಿದಂತೆ ನಿಲ್ದಾಣದಲ್ಲಿ ಉನ್ನತೀಕರಿಸಿದ ಸೌಲಭ್ಯಗಳನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ ಎಂದು ಮೈಸೂರು ವಿಭಾಗದ  ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕರು ಮತ್ತು ಸಾರ್ವಜನಿಕ ಸಂಪರ್ಕಾಧಿಕಾರಿ ಜೆ. ಲೋಹಿತೇಶ್ವರ  ತಿಳಿಸಿದರು.

ಈ ಕುರಿತು ಪ್ರಕಟಣೆ ಹೊರಡಿಸಿರುವ ಅವರು, ಮೈಸೂರು ಜಂಕ್ಷನ್ ನಿಲ್ದಾಣದಲ್ಲಿನ ದಟ್ಟಣೆಯನ್ನು ಪರಿಣಾಮಕಾರಿಯಾಗಿ ನಿಭಾಯಿಸಲು ಅಶೋಕಪುರಂ ರೈಲು ನಿಲ್ದಾಣದಲ್ಲಿನ ಮೂಲಸೌಕರ್ಯ ಸೌಲಭ್ಯಗಳನ್ನು ನವೀಕರಿಸಲಾಗಿದ್ದು, ಇದರಿಂದಾಗಿ ಪ್ರಯಾಣಿಕರ ದಟ್ಟಣೆಯ ಹರಿವನ್ನು ಮರುಹಂಚಿಕೆ ಮಾಡಲು ಅನುಕೂಲವಾಗಲಿದೆ. ಹೆಚ್ಚುವರಿ ಪ್ಲಾಟ್‌ಫಾರ್ಮ್‌ಗಳು, ಹೊಸ ಎರಡನೇ ಪ್ರವೇಶ ಮತ್ತು ವಿಸ್ತರಿತ ವಾಹನ ನಿಲ್ದಾಣ ಸೌಲಭ್ಯಗಳಂತಹ ಸೌಲಭ್ಯ ವರ್ಧನೆಗಳೊಂದಿಗೆ ಪ್ರಯಾಣಿಕರ ಸಂಖ್ಯೆಯಲ್ಲಿನ ಭವಿಷ್ಯದ ಹೆಚ್ಚಳವನ್ನು ಸರಿಹೊಂದಿಸಬಹುದಾಗಿದೆ ಎಂದು ತಿಳಿಸಿದ್ದಾರೆ.

ಮೂಲತಃ ಮೂರು ಪ್ಲಾಟ್‌ ಫಾರ್ಮ್‌ಗಳು, ಮೂರು ಚಾಲನೆಯಲ್ಲಿರುವ ಮಾರ್ಗಗಳು ಮತ್ತು ಎರಡು ಸ್ಟೇಬ್ಲಿಂಗ್ ಲೈನ್‌ ಗಳನ್ನು ಹೊಂದಿರುವ ಅಶೋಕಪುರಂ ರೈಲ್ವೆ ನಿಲ್ದಾಣವು ಮೈಸೂರು ನಗರ ರೈಲು ನಿಲ್ದಾಣದಿಂದ ಕೇವಲ 5.2 ಕಿಮೀ ದೂರದಲ್ಲಿದ್ದು, ಮೈಸೂರಿಗೆ ನಿರ್ಣಾಯಕವಾದ ಎರಡನೇ ನಿಲ್ದಾಣವಾಗಿ ಅಭಿವೃದ್ಧಿಗೊಂಡಿದೆ. ಅಶೋಕಪುರಂ ನಿಲ್ದಾಣವು ವ್ಯಾಪಕವಾದ ಪುನರಾಭಿವೃದ್ಧಿಯ ನಂತರ ತನ್ನ ಮೂಲಸೌಕರ್ಯವನ್ನು ವಿಸ್ತರಿಸಿಕೊಂಡು, ಈಗ ಐದು ಚಾಲನೆಯಲ್ಲಿರುವ ಹಳಿಮಾರ್ಗಗಳು, ಐದು ಪ್ಲಾಟ್‌ ಫಾರ್ಮ್‌ಗಳು ಮತ್ತು ಎರಡು ಸ್ಟೇಬ್ಲಿಂಗ್ ಲೈನ್‌ಗಳನ್ನು ಒಳಗೊಂಡಿದೆ.

ಈ ಮಹತ್ವದ ನಿಲ್ದಾಣ ಮರುರೂಪಿಸುವ ಉಪಕ್ರಮವನ್ನು ಒಟ್ಟು ₹ 32.5 ಕೋಟಿ ವೆಚ್ಚದಲ್ಲಿ ಮಾಡಲಾಗಿದೆ. ಇದರಲ್ಲಿ ₹ 22 ಕೋಟಿಗಳನ್ನು ಸಂಚಾರ ಸೌಲಭ್ಯಗಳ ಉನ್ನತ್ತೀಕರಣಕ್ಕೆ ಮತ್ತು ₹ 10.5 ಕೋಟಿ ಪ್ರಯಾಣಿಕರ ಸೌಕರ್ಯಗಳನ್ನು ವೃದ್ಧಿಸಲು ಉಪಯೋಗ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಈ ಉದ್ಘಾಟನೆಯು ಅಶೋಕಪುರಂ ರೈಲ್ವೆ ನಿಲ್ದಾಣದ ಆಧುನೀಕರಣ ಮತ್ತು ವಿಸ್ತರಣೆಯಲ್ಲಿ ಒಂದು ಮೈಲಿಗಲ್ಲನ್ನು ಸಾಧಿಸುತ್ತದೆ ಹಾಗು ಮೈಸೂರು-ಚಾಮರಾಜನಗರ ವಿಭಾಗದಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಹೆಚ್ಚಿನ ಸಂಪರ್ಕ ಮತ್ತು ಸೌಕರ್ಯಗಳನ್ನು ಒದಗಿಸುವ ಭರವಸೆ ನೀಡುತ್ತದೆ ಎಂದು ಜೆ. ಲೋಹಿತೇಶ್ವರ  ತಿಳಿಸಿದ್ದಾರೆ.

Key words: Inauguration -program – upgraded facilities – Ashokapuram -railway station-March 4.

website developers in mysore

Font Awesome Icons

Leave a Reply

Your email address will not be published. Required fields are marked *