ಲೋಕಸಭೆ ಚುನಾವಣೆ: ಮಥುರಾದಿಂದ 2ನೇ ಬಾರಿ ಅಖಾಡಕ್ಕೆ ಇಳಿಯಲಿದ್ದಾರೆ ಹೇಮಾ ಮಾಲಿನಿ

ನವದೆಹಲಿ: ಬಾಲಿವುಡ್ ನಟಿ ಹೇಮಾ ಮಾಲಿನಿ  ಅವರು 2024ರ ಲೋಕಸಭೆ ಚುನಾವಣೆ ಅಖಾಡಕ್ಕೆ ಇಳಿಯಲಿದ್ದಾರೆ.

1999ರಲ್ಲಿ ವಿನೋದ್ ಖನ್ನಾ ಪರವಾಗಿ ಹೇಮಾ ಮಾಲಿನಿ ಪ್ರಚಾರ ಮಾಡಿದ್ದರು. 2004ರಲ್ಲಿ ಅಫಿಷಿಯಲ್ ಆಗಿ ಬಿಜೆಪಿಗೆ ಸೇರ್ಪಡೆಯಾದರು.

2014ರಲ್ಲಿ ಲೋಕಸಭೆ ಚುನಾವಣೆಯಲ್ಲಿ ಜಯಂತ್ ಚೌಧರಿ ಅವರನ್ನು ಸೋಲಿಸಿ ಹೇಮಾ ಮಾಲಿನಿ ಮಥುರಾದಲ್ಲಿ ಗೆದ್ದು ಬೀಗಿದ್ದರು. ಇದೀಗ 2ನೇ ಬಾರಿಯು ಮಥುರಾದಿಂದಲೇ ನಟಿ ಲೋಕಸಭಾ ಎಲೆಕ್ಷನ್‌ಗೆ ನಿಂತಿದ್ದಾರೆ.

ಲೋಕಸಭೆ ಚುನಾವಣೆಗೆ ಬಿಜೆಪಿ 195 ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟಿಸಿದ್ದು, ಮಥುರಾ ಅಭ್ಯರ್ಥಿಯಾಗಿ ಹೇಮಾ ಮಾಲಿನಿ ಹೆಸರನ್ನು ಘೋಷಿಸಿದೆ.

ಮತ್ತೆ 2ನೇ ಬಾರಿ ಲೋಕಸಭೆ ಚುನಾವಣೆಗೆ  ನಿಲ್ಲುವ ಮೂಲಕ ನಟಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.

Font Awesome Icons

Leave a Reply

Your email address will not be published. Required fields are marked *